ಮಂಗಳೂರು : ಪಬ್ಜಿ ಮಾದರಿಯ ಹಿಂಸಾತ್ಮಕ ಆನ್ಲೈನ್ ಗೇಮ್ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಕೂಡಲೇ ನಿಷೇಧಿಸಬೇಕೆಂದು ಮಾಜಿ ಸಚಿವ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು.. ದೇಶದ ಯುವಕರ ಭವಿಷ್ಯದ ಹಿತ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕೂಡಲೇ ಪಾಲಿಸಿ ರೂಪಿಸಬೇಕು. ಈ ಆನ್ ಲೈವ್ ಗೇಮ್ ಗಳ ಮೂಲಕ ನಮ್ಮ ದೇಶದ ವಿರುದ್ಧ ಯುದ್ಧ ಸಾರಲಾಗಿದೆ.
ಈ ಗೇಮ್ಗಳಿಗೆ ಯುವಕರು, ವಿದ್ಯಾರ್ಥಿಗಳು ಅಡಿಕ್ಟ್ ಆಗ್ತಿದ್ದಾರೆ. ವಿದ್ಯಾರ್ಥಿಗಳ ಹಾಗೂ ಯುವಕರ ವ್ಯಕ್ತಿತ್ವ ಚೇಂಜ್ ಆಗ್ತಿದೆ. ವಿದ್ಯಾರ್ಥಿಗಳು ಹಾಗೂ ಯುವಕರ, ಶಾಲಾ ಮಕ್ಕಳ ವ್ಯಕ್ತಿತ್ವ ಹಿಂಸಾತ್ಮಕ ಆಗ್ತಿದೆ. ಯುವಕರು ಮತ್ತು ಮಕ್ಕಳು ತಾಳ್ಮೆ ಕಳೆದುಕೊಳ್ಳುತ್ತಾರೆ. ಈ ಆನ್ ಲೈನ್ ಗೇಮ್ ಗಳಿಂದಾಗಿ ಮಕ್ಕಳ ಹಾಗೂ ಯುವಕರ ವ್ಯಕ್ತಿತ್ವವೇ ಚೇಂಜ್ ಆಗುತ್ತಿದೆ. ಉಳ್ಳಾಲದ ಕೆ. ಸಿ. ರೋಡ್ ನಲ್ಲಿ ಪಬ್ ಜಿ ಗೇಮ್ ನ ದ್ವೇಷಕ್ಕೆ ಬಾಲಕನ ಕೊಲೆ ಪ್ರಕರಣ ಈ ದುರಂತಕ್ಕೆ ಉದಾಹರಣೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಬಾಲಕನೋರ್ವ ತನ್ನನ್ನ ಫ್ರೀ ಫೈರ್ ಗೇಮ್ನಲ್ಲಿ ಪದೇ ಪದೇ ಸೋಲಿಸುತ್ತಾನೆಂಬ ಕಾರಣಕ್ಕೆ ಸಹ ಆಟಗಾರನನ್ನ ಹತ್ಯೆಗೈದ ಘಟನೆ ನಡೆದಿತ್ತು.