ಪುತ್ತೂರು: ಕಾಂಗ್ರೆಸ್ ವತಿಯಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಶುಭಹಾರೈಸಿ ಹಾಕಲಾಗಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಕಳವುಗೈದ ಘಟನೆ ಕೆಯ್ಯೂರಿನಲ್ಲಿ ನಡೆದಿದ್ದು, ಈ ಬಗ್ಗೆ ಸಂಪ್ಯ ಠಾಣೆಗೆ ದೂರು ನೀಡಲಾಗಿದೆ.

ಈ ಬಗ್ಗೆ ಕೆಯ್ಯೂರು ಗ್ರಾಮೀಣ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾದ ಜಯರಾಮ್ ರೈ ಹಾಗೂ ಪದಾಧಿಕಾರಿಗಳು ದೂರು ನೀಡಿದ್ದಾರೆ.
ಕೆಯ್ಯೂರು ಗ್ರಾಮೀಣ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ಪಂಚಾಯತ್ ಪರವಾನಿಗೆಯನ್ನು ಪಡೆದು ಸೆ.22 ರಂದು ಸಂಜೆ ಕೆಯ್ಯೂರು ಗ್ರಾಮದ ದೇವಿನಗರದಲ್ಲಿ ಬ್ಯಾನರ್ ಹಾಕಿದ್ದು, ಸದ್ರಿ ಬ್ಯಾನರ್ ಸೆ.24 ರಂದು ರಾತ್ರಿ ಕಾಣೆಯಾಗಿದ್ದು, ಈ ಕೃತ್ಯವೆಸಗಿದವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
