ಪುತ್ತೂರು: ಬನ್ನೂರು ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆಯಾಗಿದ್ದ, ಮಾಜಿ ಸದಸ್ಯೆ, ಚಿಕ್ಕಮುಡ್ನೂರು ಕಾಂಗ್ರೆಸ್ ಮುಖಂಡೆ ಗೀತಾ ಬಾಬು ಗೌಡ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದ ಬಾಬು ಗೌಡ ಚಿಕ್ಕಮುಡ್ನೂರು ರವರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದರು.

ಬೂತ್ ಸಮಿತಿ ಸಭೆಯಲ್ಲಿ ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಮುಕುಂದ ಬಜತ್ತೂರು ಇವರು ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಬಿಜೆಪಿಗೆ ಸೇರ್ಪಡೆಗೊಳಿಸಿದರು.

ಈ ಸಂದರ್ಭದಲ್ಲಿ ತಾ.ಪಂಚಾಯತ್ ಮಾಜಿ ಸದಸ್ಯ ಲಕ್ಷಣ ಗೌಡ ಬೆಳ್ಳಿಪ್ಪಾಡಿ, ಬನ್ನೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್. ,ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಾ ರಮೇಶ್, ನೆಕ್ಕಿಲಾಡಿ ಶಕ್ತಿಕೇಂದ್ರದ ಸದಾನಂದ ನೆಕ್ಕಿಲಾಡಿ, ಪಂಚಾಯತ್ ಸದಸ್ಯರಾದ ತಿಮ್ಮಪ್ಪ ಪೂಜಾರಿ ಮೂಡಾಯೂರು, ರಾಘವೇಂದ್ರ ಅಂದ್ರಟ, ಬೂತ್ ಸಮಿತಿಯ ಚಿದಾನಂದ ಬೀರಿಗ, ತಿಮ್ಮಪ್ಪ ಪುಳುವಾರು, ಪುರುಷೋತ್ತಮ ಕೊಲ್ಯ, ಕೇಶವ ಕೊಲ್ಯ, ರತ್ನಾಕರ ಪ್ರಭು, ರಮೇಶ್ ಗೌಡ ಏಕ, ಪ್ರಕಾಶ್ ಪಂಜಿಗ, ಯೋಗೀಶ್ ಮೇರ್ಲ, ವಿಶ್ವನಾಥ ಗೌಡ, ದಿನೇಶ್ ಏಕ ಮತ್ತಿತರರು ಉಪಸ್ಥಿತರಿದ್ದರು.