ವಿಟ್ಲ: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈರಿಕಟ್ಟೆ ಎಂಬಲ್ಲಿ ಕೇರಳಕ್ಕೆ ಅಕ್ರಮ ಒಳರಸ್ತೆ ಇರುವ ಸಮೀಪದಲ್ಲೇ ಅನ್ಯಮತೀಯ ವ್ಯಕ್ತಿಯೋರ್ವ ದನದ ಫಾರ್ಮ್ ಪ್ರಾರಂಭಿಸುವ ಬಗ್ಗೆ ಕಾರ್ಯ ನಡೆಯುತ್ತಿದ್ದು, ಇದು ಕಾರ್ಯಾಚರಣೆಗೆ ಬಂದರೆ ಕೇರಳಕ್ಕೆ ಅಕ್ರಮವಾಗಿ ಕಸಾಯಿಖಾನೆಗೆ ಗೋ ಸಾಗಟ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಸಾರ್ವಜನಿಕ ಆರೋಪಿಸಿದ್ದಾರೆ.

ದನದ ಫಾರ್ಮ್ ಪ್ರಾರಂಭಿಸುವುದನ್ನು ತಡೆಯುವಂತೆ ಸ್ಥಳೀಯ ಹಿಂದೂಗಳು ಹಾಗೂ ಸಾರ್ವಜನಿಕರು ಪುಣಚ ಗ್ರಾಮ ಪಂಚಾಯತ್ ನಲ್ಲಿ ಮನವಿ ಸಲ್ಲಿಸಿದ್ದಾರೆ.

ಕಾರ್ಯ ಮುಂದುವರಿಸಿದರೆ ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಸಾರ್ವಜನಿಕರು ಮತ್ತು ವಿಟ್ಲ ತಾಲೂಕಿನ ಹಿಂದೂ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.


























