Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

    ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಮನೆಯ ಸಿಟೌಟ್‌ಗೆ ಬಂದು ಹಲ್ಲೆ : ಪ್ರಕರಣ ದಾಖಲು..!!

    ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

    ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

    ಪುತ್ತೂರು: ಕಾರಿಗೆ ನಕಲಿ ನಂಬರ್ : ಪ್ರಕರಣ ದಾಖಲು..!!

    ಪುತ್ತೂರು: ಕಾರಿಗೆ ನಕಲಿ ನಂಬರ್ : ಪ್ರಕರಣ ದಾಖಲು..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು : ನಳ್ಳಿ ನೀರಿನ ವಿಚಾರದಲ್ಲಿ ಹಲ್ಲೆ ಆರೋಪ : ಪ್ರಕರಣ ದಾಖಲು..!!

    ವಿಟ್ಲ: ಶ್ರೀವಿಭಾ ಕೇಪು ಸರಿಗಮಪ ಲಿಟಲ್ ಚಾಂಪ್ಸ್ ಸ್ಪರ್ಧೆಗೆ ಆಯ್ಕೆ..!!

    ವಿಟ್ಲ: ಶ್ರೀವಿಭಾ ಕೇಪು ಸರಿಗಮಪ ಲಿಟಲ್ ಚಾಂಪ್ಸ್ ಸ್ಪರ್ಧೆಗೆ ಆಯ್ಕೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನಿಧನ

ನಾಪತ್ತೆಯಾಗಿದ್ದ ಬದಿಯಡ್ಕದ ಡಾ. ಕೃಷ್ಣಮೂರ್ತಿ ಮೃತದೇಹ ಕುಂದಾಪುರ ರೈಲ್ವೇ ಹಳಿಯಲ್ಲಿ ಪತ್ತೆ : ಸಾವಿನ ಸುತ್ತ ಹಲವು ಅನುಮಾನ..!!??

November 11, 2022
in ನಿಧನ, ರಾಜ್ಯ
0
ನಾಪತ್ತೆಯಾಗಿದ್ದ ಬದಿಯಡ್ಕದ ಡಾ. ಕೃಷ್ಣಮೂರ್ತಿ ಮೃತದೇಹ ಕುಂದಾಪುರ ರೈಲ್ವೇ ಹಳಿಯಲ್ಲಿ ಪತ್ತೆ : ಸಾವಿನ ಸುತ್ತ ಹಲವು ಅನುಮಾನ..!!??
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಕುಂದಾಪುರ: ಬದಿಯಡ್ಕದಲ್ಲಿ ಸುಮಾರು 30 ವರ್ಷಗಳಿಂದ ಹೆಸರಾಂತ ದಂತ ವೈದ್ಯರಾಗಿದ್ದ ಡಾ. ಕೃಷ್ಣಮೂರ್ತಿ ಸರ್ಪಂಗಳ (57) ಅವರು ನ. 8ರಂದು ನಾಪತ್ತೆಯಾಗಿದ್ದು, ಅವರ ಮೃತದೇಹ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ.

Advertisement
Advertisement

ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆಯೆಂದು ಕಂಡು ಬಂದರೂ, ನ. 8ರಂದು ನಡೆದ ಘಟನೆ, ಜಾಗದ ವಿಚಾರಕ್ಕಾಗಿನ ಕಿರುಕುಳ ಈ ಸಾವಿಗೆ ದುಷ್ಪೇರಣೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿ ತಿಳಿದು ಬಂದಿಲ್ಲ.

ತಲ್ಲೂರು ಸಮೀಪದ ರಾಜಾಡಿಯ ಕಡೆಗೆ ತೆರಳುವ ರಸ್ತೆಯಲ್ಲಿ ತೆರಳುವ ಹಾದಿಯಲ್ಲಿ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆ ಎಂಬಲ್ಲಿನ ರೈಲ್ವೇ ಹಳಿಯಲ್ಲಿ ಡಾ. ಕೃಷ್ಣಮೂರ್ತಿ ಅವರ ಮೃತದೇಹ ಎರಡು ಭಾಗವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇಹದ ತಲೆ ಭಾಗ ಒಂದು ಕಡೆ ಇದ್ದರೆ, ಅಲ್ಲಿಂದ 50 ಮೀ. ದೂರದಲ್ಲಿ ದೇಹದ ಉಳಿದ ಭಾಗ ಅಂದರೆ ಹೊಟ್ಟೆಗಿಂತ ಕೆಳಗಿನ ಭಾಗ ಪತ್ತೆಯಾಗಿದೆ.
ಅಲ್ಲಿಂದ ಮೃತದೇಹ ಪತ್ತೆಯಾದ ಹಟ್ಟಿಯಂಗಡಿಯ ಸ್ಥಳಕ್ಕೆ ಸುಮಾರು 10-12 ಕಿ.ಮೀ. ದೂರವಿದೆ. ಅಲ್ಲಿಯವರೆಗೆ ಹಳಿಯಲ್ಲಿಯೇ ನಡೆದುಕೊಂಡೇ ಬಂದರೆ ? ಅದಲ್ಲದೆ ರಾತ್ರಿ ವೇಳೆ ಮೊಬೈಲ್‌ ಅಥವಾ ಬೆಳಕಿನ ವ್ಯವಸ್ಥೆಯಿಲ್ಲದೆ ಹಳಿಯಲ್ಲಿಯೇ ಅಷ್ಟು ದೂರ ನಡೆದುಕೊಂಡು ಬರಲು ಸಾಧ್ಯವೇ? ಒಂದು ಬಸ್ಸಿನಲ್ಲಿ ಬಂದಿದ್ದರೂ, ತಲ್ಲೂರಲ್ಲಿ ಇಳಿದು ಅಲ್ಲಿಂದ 2-3 ಕಿ.ಮೀ. ದೂರದವರೆಗೆ ನಡೆದುಕೊಂಡು ಈ ಸ್ಥಳಕ್ಕೆ ಬಂದಿರಬಹುದೇ? ಹೀಗೆ ಕೆಲವೊಂದು ಸಂಶಯ ಕಂಡು ಬಂದಿದೆ.

Advertisement

ನ.9 ರ ಬೆಳಗ್ಗೆ 8 ಗಂಟೆಗೆ ಮೃತದೇಹ ಪತ್ತೆಯಾದ ಬಳಿಕ ರೈಲ್ವೇ ಟ್ರ್ಯಾಕ್‌ವೆುನ್‌ ಗಣೇಶ ಕೆ. ಅವರು ನೀಡಿದ ದೂರಿನಂತೆ ಮೊದಲಿಗೆ ಅಪರಿಚಿತ ಮೃತದೇಹವೆಂದು ಗುರುತಿಸಿ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ರೈಲ್ವೇ ಹಳಿಗೆ ದೇಹವನ್ನು ಅಡ್ಡವಿಟ್ಟು ಮಲಗಿದ್ದು, ಯಾವುದೋ ರೈಲು ಹರಿದು ಸಾವನ್ನಪ್ಪಿರುವ ಸಾಧ್ಯತೆಯಿದೆ ಎನ್ನುವದಾಗಿ ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗುರುತು ಖಚಿತಪಡಿಸಿದ ಪುತ್ರಿ:

ಕುಂದಾಪುರದ ತಲ್ಲೂರು – ಹಟ್ಟಿಯಂಗಡಿ ಸಮೀಪ ಅಪರಿಚಿತ ಮೃತದೇಹ ಪತ್ತೆಯಾದ ಬಗ್ಗೆ ಸುದ್ದಿ ತಿಳಿದ ಡಾ| ಕೃಷ್ಣಮೂರ್ತಿ ಅವರ ಮನೆಯವರು, ನ.10 ರಂದು ಮಧ್ಯಾಹ್ನದ ವೇಳೆಗೆ ಕುಂದಾಪುರಕ್ಕೆ ಆಗಮಿಸಿದ್ದರು. ಅವರ ದೇಹದ ಮೇಲಿದ್ದ ಜನಿವಾರ, ಹಿಂಬದಿ ದೇಹದಲ್ಲಿದ್ದ ಕಪ್ಪು ಮಚ್ಚೆ, ಒಳ ಉಡುಪುಗಳನ್ನು ಗುರುತಿಸಿ, ಇದು ಕೃಷ್ಣಮೂರ್ತಿ ಅವರದೇ ಮೃತದೇಹವೆಂದು ಗುರುತಿಸಲಾಗಿದೆ. ಸಹೋದರ ಡಾ. ರಾಮ್‌ಮೋಹನ್‌ ಪುತ್ತೂರು, ಭಾವ ಮನೋಹರ್‌, ಸ್ನೇಹಿತ ಉದಯ್‌ ಕುಮಾರ್‌, ಆಸ್ಪತ್ರೆ ಕಂಪೌಂಡರ್‌ ಸಿ.ಎಚ್‌. ಪರಮೇಶ್ವರ ಭಟ್‌, ಬದಿಯಡ್ಕ ಠಾಣೆಯ ಮೂವರು ಪೊಲೀಸ್‌ ಸಿಬಂದಿ ಆಗಮಿಸಿ, ಬಹುತೇಕ ಇದು ಅವರದೇ ಮೃತದೇಹವೆಂದು ಖಚಿತಪಡಿಸಿದ್ದರು. ಆ ಬಳಿಕ ನ.10 ರ ಸಂಜೆ 8 ಗಂಟೆಯ ವೇಳೆಗೆ ಅವರ ಪುತ್ರಿ ಆಗಮಿಸಿ ತಂದೆಯದ್ದೇ ಮೃತದೇಹ ಎನ್ನುವುದನ್ನು ಖಚಿತಪಡಿಸಿದ್ದಾರೆ.

ಘಟನೆ ಹಿನ್ನೆಲೆ :

ನ.8 ರಂದು ಬೆಳಗ್ಗೆ 9 ಸುಮಾರಿಗೆ ಡಾ. ಕೃಷ್ಣಮೂರ್ತಿ ಅವರು ಆಸ್ಪತ್ರೆಗೆ ತೆರಳಿ, ಎಂದಿನಂತೆ ಕೆಲಸ ಆರಂಭಿಸಿದ್ದರು. ಬೆಳಗ್ಗೆ 11 ಗಂಟೆಯ ಸುಮಾರಿಗೆ ಕ್ಲಿನಿಕ್‌ಗೆ ತಪಾಸಣೆಗೆಂದು ಬಂದ ಮುಸ್ಲಿಂ ಯುವತಿಯೊಬ್ಬಳ ಜತೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ, ವೈದ್ಯರ ಮೇಲೆ ಗುಂಪೊಂದು ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಅಲ್ಲಿದ್ದವರು ತಡೆದಿದ್ದಾರೆ. ಇದಲ್ಲದೆ ನಿಮ್ಮ ವಿರುದ್ಧ ಕೇಸು ದಾಖಲಿಸುವುದಾಗಿಯೂ ಆ ಗುಂಪು ಬೆದರಿಕೆ ಹಾಕಿರುವುದಾಗಿ ಡಾ| ಕೃಷ್ಣಮೂರ್ತಿ ಅವರ ಮನೆಯವರು ಬದಿಯಡ್ಕ ಠಾಣೆಗೆ ನೀಡಿದ ದೂರಿನಲ್ಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಾ| ಕೃಷ್ಣಮೂರ್ತಿ ಅವರ ವಿರುದ್ಧ ಅನುಚಿತ ವರ್ತನೆ ಎಸಗಿರುವುದಾಗಿ ಆ ಗುಂಪಿನವರು ಬದಿಯಡ್ಕ ಠಾಣೆಗೆ ದೂರು ನೀಡಿ, ಅದರಂತೆ ಕೇಸು ದಾಖಲಾಗಿದೆ. ಇವರ ನಿಕಟವರ್ತಿಯವರು ಹೇಳುವ ಪ್ರಕಾರ ಈ ಘಟನೆಯಿಂದ ಕುಗ್ಗಿಹೋದ ವೈದ್ಯರು, ಬೇಸತ್ತು ಮಧ್ಯಾಹ್ನ 12 ಗಂಟೆಗೆ ಅಲ್ಲಿಂದ ಬೈಕ್‌ನಲ್ಲಿ ಹೊರಟಿದ್ದಾರೆ. ಮಧ್ಯಾಹ್ನ ಊಟಕ್ಕೆ ಹೊರಟಿರಬಹುದು ಎಂದು ಕಂಪೌಂಡರ್‌ ಹಾಗೂ ಮತ್ತಿತರರು ಭಾವಿಸಿದ್ದರು. ಆದರೆ ಮೊಬೈಲನ್ನು ಆಸ್ಪತ್ರೆಯಲ್ಲಿಯೇ ಬಿಟ್ಟಿದ್ದು, ಬೈಕ್‌ ಬದಿಯಡ್ಕ ಪೇಟೆಯಲ್ಲಿಟ್ಟು ಆ ಬಳಿಕ ನಾಪತ್ತೆಯಾಗಿದ್ದರು.

ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್‌, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕಂಡ್ಲೂರು ಠಾಣಾಧಿಕಾರಿ ಪವನ್‌ ನಾಯಕ್‌, ಸಿಬಂದಿ, ಫಾರೆನ್ಸಿಕ್‌ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನ.10 ರ ಸಂಜೆ ಮತ್ತೆ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಐ ಪವನ್‌ ನೇತೃತ್ವದ ಪೊಲೀಸರ ತಂಡ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಇನ್ನು ಯಾವುದಾದರೂ ಸುಳಿವು, ಗುರುತು, ವಸ್ತುಗಳು ಸಿಗಬಹುದೇ ಅನ್ನುವುದರ ಬಗ್ಗೆ ಹುಡುಕಾಟ ನಡೆಸಿದರು.

ಹತ್ತಾರು ಅನುಮಾನ :

ಮೇಲ್ನೋಟಕ್ಕೆ ಇದು ಆತ್ಮಹತ್ಯೆಯೆಂದು ಕಂಡು ಬಂದರೂ, ಕೆಲವೊಂದು ಅನುಮಾನಗಳು ಹುಟ್ಟಿಕೊಂಡಿವೆ. ಸಾಯಲೇಬೇಕೆಂದು ನಿರ್ಧಾರ ಮಾಡಿದ್ದರೂ ಸಹ ಬದಿಯಡ್ಕದಿಂದ ಸುಮಾರು 180-190 ಕಿ.ಮೀ. ದೂರದ ಕುಂದಾಪುರದಲ್ಲಿಯೇ ಸಾಯಬೇಕು ಅಂತ ಯಾಕೆ ಅನ್ನುವುದು? ಕುಂದಾಪುರಕ್ಕೆ ಅವರು ರೈಲು ಅಥವಾ ಬಸ್‌ ಅಥವಾ ಇನ್ನು ಯಾವ ವಾಹನಗಳಲ್ಲಿ ಬಂದಿರಬಹುದು ? ಅದಕ್ಕೆ ಯಾವುದೇ ದಾಖಲೆಯಿಲ್ಲ? ರೈಲಿನಲ್ಲಿ ಬಂದಿದ್ದರೂ ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಮೃತದೇಹ ಪತ್ತೆಯಾದ ಹಟ್ಟಿಯಂಗಡಿಯ ಸ್ಥಳಕ್ಕೆ ಸುಮಾರು 10-12 ಕಿ.ಮೀ. ದೂರವಿದೆ. ಅಲ್ಲಿಯವರೆಗೆ ಹಳಿಯಲ್ಲಿಯೇ ನಡೆದುಕೊಂಡೇ ಬಂದರೆ ? ಅದಲ್ಲದೆ ರಾತ್ರಿ ವೇಳೆ ಮೊಬೈಲ್‌ ಅಥವಾ ಬೆಳಕಿನ ವ್ಯವಸ್ಥೆಯಿಲ್ಲದೆ ಹಳಿಯಲ್ಲಿಯೇ ಅಷ್ಟು ದೂರ ನಡೆದುಕೊಂಡು ಬರಲು ಸಾಧ್ಯವೇ? ಒಂದು ಬಸ್ಸಿನಲ್ಲಿ ಬಂದಿದ್ದರೂ, ತಲ್ಲೂರಲ್ಲಿ ಇಳಿದು ಅಲ್ಲಿಂದ 2-3 ಕಿ.ಮೀ. ದೂರದವರೆಗೆ ನಡೆದುಕೊಂಡು ಈ ಸ್ಥಳಕ್ಕೆ ಬಂದಿರಬಹುದೇ? ಹೀಗೆ ಕೆಲವೊಂದು ಸಂಶಯ ಕಂಡು ಬಂದಿದೆ.

ಜಾಗದ ವಿಚಾರ ಕಾರಣವೇ? :

ಮನೆಯ ಕೆಲವರು ಹೇಳುವ ಮೂಲಗಳ ಪ್ರಕಾರ ನ.8 ರಂದು ನಡೆದ ಘಟನೆಗೂ ಮೊದಲೇ ಡಾ.ಕೃಷ್ಣಮೂರ್ತಿ ಅವರ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ 6 ತಿಂಗಳಿನಿಂದ ಕೆಲವರಿಂದ ನಿರಂತರ ಕಿರುಕುಳ, ಬೆದರಿಕೆ ಬರುತ್ತಿದ್ದು, ಜಾಗದ ಮಾರಾಟಕ್ಕೆ ಒತ್ತಾಯಿಸುತ್ತಿದ್ದರು ಎನ್ನಲಾಗುತ್ತಿದೆ. ಜಾಗದ ಖರೀದಿಗಾಗಿ ಬೇಡಿಕೆ ಇಡುತ್ತಿದ್ದರು. ಈ ವಿಚಾರದಿಂದಲೂ ವೈದ್ಯರು ನೊಂದಿದ್ದರೇ? ಅನ್ನುವ ಪ್ರಶ್ನೆ ಈಗ ಮೂಡಿದೆ. ಒಟ್ಟಿನಲ್ಲಿ ಪೊಲೀಸ್‌ ತನಿಖೆಯಿಂದಷ್ಟೇ ಸತ್ಯಾಂಶ ಹೊರಗೆ ಬರಬಹುದು.

Previous Post

ರಾಜ್ಯ ಮಟ್ಟದ ಯಂಗ್ ಇಂಡಿಯಾ ಕೆ ಬೋಲ್ ಸ್ಪರ್ಧೆಯ ವಿಜೇತರಾಗಿ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ

Next Post

ಉಪ್ಪಿನಂಗಡಿ : ಬೈಕ್ ಗಳ ನಡುವೆ ಡಿಕ್ಕಿ : ಸವಾರರಿಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು..!!

OtherNews

ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿ ಕುಸಿದು ಬಿದ್ದು ನಿರೂಪಕ ಮೃತ್ಯು..!!
Featured

ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿ ಕುಸಿದು ಬಿದ್ದು ನಿರೂಪಕ ಮೃತ್ಯು..!!

April 11, 2026
ಪುತ್ತೂರು: ರೈಲ್ವೇ ಕಾಂಟ್ರಾಕ್ಟ‌ರ್ ರಾಮಚಂದ್ರ ನಿಧನ…!!!
Featured

ಪುತ್ತೂರು: ರೈಲ್ವೇ ಕಾಂಟ್ರಾಕ್ಟ‌ರ್ ರಾಮಚಂದ್ರ ನಿಧನ…!!!

March 29, 2026
ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!!
ನಿಧನ

ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!!

March 28, 2026
ಅನಾರೋಗ್ಯದ ಹಿನ್ನಲೆ ; ಮುರ ನಿವಾಸಿ ಪ್ರಕಾಶ್ ಸಪಲ್ಯ ನಿಧನ..!!
ನಿಧನ

ಅನಾರೋಗ್ಯದ ಹಿನ್ನಲೆ ; ಮುರ ನಿವಾಸಿ ಪ್ರಕಾಶ್ ಸಪಲ್ಯ ನಿಧನ..!!

March 23, 2026
ಸಮಾಜ ಸೇವಕ, ಕ್ರೀಡಾಪಟು ಸಮೀರ್ ಶರೀಫ್ ನಿಧನ..!!
ನಿಧನ

ಸಮಾಜ ಸೇವಕ, ಕ್ರೀಡಾಪಟು ಸಮೀರ್ ಶರೀಫ್ ನಿಧನ..!!

March 23, 2026
ಪುತ್ತೂರು: ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!
ನಿಧನ

ಪುತ್ತೂರು: ಅನಾರೋಗ್ಯದ ಹಿನ್ನಲೆ ಮಹಿಳೆ ಮೃತ್ಯು..!!

March 21, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

April 29, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ಮನೆಯ ಸಿಟೌಟ್‌ಗೆ ಬಂದು ಹಲ್ಲೆ : ಪ್ರಕರಣ ದಾಖಲು..!!

April 29, 2026
ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

April 29, 2026
ಪುತ್ತೂರು: ಕಾರಿಗೆ ನಕಲಿ ನಂಬರ್ : ಪ್ರಕರಣ ದಾಖಲು..!!

ಪುತ್ತೂರು: ಕಾರಿಗೆ ನಕಲಿ ನಂಬರ್ : ಪ್ರಕರಣ ದಾಖಲು..!!

April 29, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.