ಸುಳ್ಯ: ನಗರದ ಬೀರಮಂಗಲ ಪರಿಸರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಯುವತಿಯ ಮೃತದೇಹ ಗೋಣಿಚೀಲದಲ್ಲಿ
ಪತ್ತೆಯಾಗಿದೆ.
ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ಎಂಬಾತ ತನ್ನ ಪತ್ನಿಯನ್ನು ಕೊಂದು ಗೋಣಿಚೀಲದಲ್ಲಿ ತುಂಬಿಸಿ ಪರಾರಿಯಾಗಿರುವುದಾಗಿ ಶಂಕೆ ವ್ಯಕ್ತವಾಗಿದೆ.
ಇಮ್ರಾನ್ ಕಳೆದ ಆರು ತಿಂಗಳಿನಿಂದ ಬೀರಮಂಗಲ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು,ಎರಡು ದಿನಗಳ ಹಿಂದೆ ಊರಿಗೆ ತೆರಳುತ್ತೇನೆ ಎಂದು ಹೊಟೇಲ್ ನವರಲ್ಲಿ ಹೇಳಿ ಊರಿಗೆ
ಹೋಗಿದ್ದ. ಇವತ್ತು ಪಕ್ಕದ ರೂಂ ನವರಿಗೆ ಸಂಶಯ ಮೂಡಿತು. ಅವನು ಹೋಗುವಾಗ ಅವನ ಪತ್ನಿಯನ್ನು ಕರೆದುಕೊಂಡು ಹೋಗಿರಲಿಲ್ಲ. ಮೊನ್ನೆ ಮನೆಯಲ್ಲಿ ಕಿರುಚುವ ಶಬ್ದ ಕೇಳಿದೆ ಎಂದು ಅವರು ಸ್ನೇಹಿತರೊಬ್ಬರಿಗೆ ತಿಳಿಸಿದರು.
ಹೊಟೇಲ್ ಮಾಲೀಕರಿಗೆ ತಿಳಿಸಿ ಹೊಟೇಲ್ ಮಾಲಕರು ಪೋಲಿಸರಿಗೆ ವಿಷಯ ತಿಳಿಸಿ ಪೊಲೀಸರು ಇಂದು ಸಂಜೆ ಬಾಡಿಗೆ ಮನೆಗೆ ಬಂದು ಬಾಗಿಲು ಒಡೆದು ಪರಿಶೀಲಿಸುವಾಗ ಮನೆಯೊಳಗೆ ಗೋಣಿ ಚೀಲದಲ್ಲಿ
ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಸಂಶಯಿತ ಆರೋಪಿ ಪರಾರಿಯಾಗಿದ್ದಾನೆ. ಸುಳ್ಯ ಪೋಲಿಸರು ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
ಪಿಂಗರ್ ಪ್ರಿಂಟ್ ತಜ್ಞರು ಮತ್ತು ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಬರಲಿದ್ದಾರೆಂದು ತಿಳಿದು ಬಂದಿದೆ.