ವಿಟ್ಲ : ಬಿಲ್ಲವ ಸಂಘ ರಿ ವಿಟ್ಲ, ಬೆಳ್ಳಿಹಬ್ಬ ಸಂಭ್ರಮೋತ್ಸವ ಸಮಿತಿ, ಶಿವಗಿರಿ ಪೊನ್ನೊಟ್ಟು ಇದರ 25ನೇ ವಾರ್ಷಿಕೋತ್ಸವದ ಅಂಗವಾಗಿ ‘ಬೆಳ್ಳಿಹಬ್ಬ ಸಂಭ್ರಮೋತ್ಸವ 2022’ ಕಾರ್ಯಕ್ರಮವು ನ. 27 ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಶಿವಗಿರಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸೋಲೂರು ರಾಮನಗರ, ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಸ್ವಾಮಿ ವಿಖ್ಯಾತಾನಂದ ರವರು ನೆರವೇರಿಸಲಿದ್ದಾರೆ.
![](https://zoomintv.online/wp-content/uploads/2022/11/IMG-20221126-WA0037-1024x682.jpg)
ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಮಾಣಿಲ ಮುರುವ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀಕೃಷ್ಣ ಗುರೂಜಿ ರವರು ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಿಹಬ್ಬ ಸಂಭ್ರಮೋತ್ಸವ ಸಮಿತಿ ಅಧ್ಯಕ್ಷರಾದ ಲ.ಡಾ. ಗೀತಪ್ರಕಾಶ್ ರವರು ವಹಿಸಲಿದ್ದಾರೆ.
ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷರಾದ ಹರೀಶ್ ಸಿ. ಎಚ್ ರವರು ಗೌರವ ಉಪಸ್ಥಿತಿಯನ್ನು ವಹಿಸಲಿದ್ದು, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಅತಿಥಿಗಳಾಗಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಹೆಚ್. ಜಗನ್ನಾಥ ಸಾಲಿಯಾನ್, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ವಿಟ್ಲದ ಅಧ್ಯಕ್ಷರಾದ ಸಂಜೀವ ಪೂಜಾರಿ ನಿಡ್ಯ, ವಿಟ್ಲ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷರಾದ ಸರಿತ ರೂಪರಾಜ್, ವಿಟ್ಲ ಯುವವಾಹಿನಿ ಅಧ್ಯಕ್ಷರಾದ ಯಶವಂತ ಪೂಜಾರಿ, ವಿಟ್ಲ ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಪ್ರಕಾಶ್ ವಿಟ್ಲ, ಬೆಳ್ಳಿಹಬ್ಬ ಸಂಭ್ರಮೋತ್ಸವ ಸಮಿತಿ ಗೌರವಾಧ್ಯಕ್ಷರಾದ ಕ್ಯಾ. ದಾಸಪ್ಪ ಪೂಜಾರಿ, ನೆಕ್ಕಿಲಾರು, ವಿಟ್ಲ ಬಿಲ್ಲವ ಮಹಿಳಾ ಘಟಕದ ಗೌರವಾಧ್ಯಕ್ಷರಾದ ಸುಜಾತಾ ಸಂಜೀವ ಪೂಜಾರಿ ರವರು ಆಗಮಿಸಲಿದ್ದಾರೆ.
ಮಧ್ಯಾಹ್ನ 2 ರಿಂದ 4 ಗಂಟೆ ವರೆಗೆ ಕಲ್ಲಡ್ಕ ವಿಠಲ್ ನಾಯಕ್ ಮತ್ತು ಬಳಗದವರಿಂದ ‘ಗೀತಾ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. 4.15 ರಿಂದ 5.15ರ ವರೆಗೆ ವಿದುಷಿ ನಯನ ಸತ್ಯನಾರಾಯಣ ಶಿಷ್ಯ ವೃಂದದವರಿಂದ ‘ಭರತನಾಟ್ಯ’ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.