ನಾವೂರು ಪೇಟೆಯಲ್ಲಿರುವ ಆರೋಗ್ಯ ಕ್ಲಿನಿಕ್ ಗೆ ತಡರಾತ್ರಿ ಬೆಂಕಿ ಬಿದ್ದು ಅಪಾರ ವಸ್ತುಗಳು ಸುಟ್ಟು ಕರಕಲಾದ ಘಟನೆ ಅ. 7 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಅನಾಹುತದದ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದು, ಯಾರೋ ಕಿಡಿಗೇಡಿಗಳು ಡಿಸೇಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂಬ ವದಂತಿ ಹರಡಿದೆ. ಘಟನಾ ಸ್ಥಳದಲ್ಲಿ ನೂರಾರು ಮಂದಿ ಸಾರ್ವಜನಿಕರು ಜಮಾಯಿಸಿದ್ದಾರೆ.
ನಾವೂರು ಗ್ರಾಮದ ಶೇಖರ್ ಪೂಜಾರಿ ಎಂಬವರ ಮಾಲೀಕತ್ವದ ಸ್ವಾತಿ ಕಟ್ಟಡದಲ್ಲಿ ಡಾ. ಪ್ರದೀಪ ಎ ಅವರಿಗೆ ಸೇರಿದ ಆರೋಗ್ಯ ಕಿಬ್ಲಿಕ್ ಕಾರ್ಯಚರಿಸುತ್ತಿದ್ದು ಬುಧವಾರ ತಡರಾತ್ರಿ ದುಷ್ಕರ್ಮಿಗಳು ಕ್ಲಿನಿಕ್ ನ ಕಿಟಕಿ ಬಳಿ ಡಿಸೇಲ್ ಹಾಕಿ ಬೆಂಕಿ ಹಚ್ಚಿರುವ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ಆರೋಗ್ಯ ಕಿಬ್ಲಿಕ್ ನ ಕನ್ಸಲ್ ಟೆಂಟ್ ಕೊಠಡಿ ಸೇರಿ ಮೂರು ಕೊಠಡಿಗಳು ಸುಟ್ಟು ಹಾನಿಯಾಗಿದೆ. ಹಾಸಿಗೆ, ಔಷದಿಗಳು, ಇಲೆಕ್ಟ್ರಾನಿಕ್ ಸೊತ್ತುಗಳು ಬೆಂಕಿ ಅಹುತಿಯಾಗಿ ಅಪಾರ ಹಾನಿ ಸಂಭವಿಸಿದೆ.
ಘಟನ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸರು, ಅಗ್ನಿಶಾಮಕ ದಳ, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


























