ಬಂಟ್ವಾಳ: ಬಿ.ಸಿ.ರೋಡು – ಪುಂಜಾಲಕಟ್ಟೆ ಹೆದ್ದಾರಿಯ ಬಂಟ್ವಾಳ ಸಮೀಪದ ಚಂಡ್ತಿಮಾರಿನಲ್ಲಿ ಪಿಕಪ್ ವಾಹನ ಹಾಗೂ ಹ್ಯುಂಡೈ ಕ್ರೆಟ್ಟಾ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಪಿಕಪ್ ಹೆದ್ದಾರಿ ಬದಿಯ ಮನೆಗೆ ಡಿಕ್ಕಿ ಹೊಡೆದು ಮನೆಗೆ ಹಾನಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಕ್ರೆಟ್ಟಾ ಕಾರು ಪುಂಜಾಲಕಟ್ಟೆ ಭಾಗದಿಂದ ಆಗಮಿಸಿದ್ದು, ಪಿಕಪ್ ಬಂಟ್ವಾಳ ಭಾಗದಿಂದ ತೆರಳುತ್ತಿತ್ತು ಎನ್ನಲಾಗಿದೆ.
ಘಟನೆಯಲ್ಲಿ ಮನೆಯ ಒಂದು ಭಾಗಕ್ಕೆ ಹಾನಿಯಾಗಿದ್ದು, ವಾಹನಗಳು ಜಖಂಗೊಂಡಿವೆ. ಬಂಟ್ವಾಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.