ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಬ್ರಹ್ಮರಥೋತ್ಸವದ ಮಾರನೆ ದಿನ ಎ.೧೮ರಂದು ಸಂಜೆ ಅವಭೃತ ಸವಾರಿಯಲ್ಲಿ ಶ್ರೀ ದೇವರು ವೀರಮಂಗಲ ಹೊಳೆಗೆ ಇಳಿಯಲು ಮರಳಿನ ದಿಬ್ಬವನ್ನು ಬದಿಗೆ ಸರಿಸುವ ಕಾಮಗಾರಿ ಪೂರ್ಣಗೊಂಡಿದೆ.
ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಅರ್ಚಕ ಕೆ.ಪ್ರೀತಂ ಪುತ್ತೂರಾಯ, ಸಿಬ್ಬಂದಿ ಪದ್ಮನಾಭ ಅವರು ಎ.೧೩ರಂದು ವೀರಮಂಗಲ ಶ್ರೀ ದೇವರ ಅವಭೃತ ಹೊಳೆಗೆ ತೆರಳಿ ಅಲ್ಲಿ ದೇವರ ಅವಭೃತದ ಸ್ಥಳದಲ್ಲಿನ ಆಳದ ಕುರಿತು ಹೊಳೆಗೆ ಇಳಿದು ನೋಡಿ ಪರಿಶೀಲಿಸಿದ್ದಾರೆ. ಹೊಳೆಯಲ್ಲಿ ನೀರಿನ ಹರಿವು ಹೆಚ್ಚು ಮಾಡಲು ಮರಳಿನ ದಿಬ್ಬಗಳ್ನು ಬದಿಗೆ ಸರಿಸಲು ಜೆಸಿಬಿ ಆಪರೇಟರ್‌ಗೆ ಮಾರ್ಗಸೂಚಿಯನ್ನು ನೀಡಿದರು. ಎ.೧೪ರಂದು ಮರಳಿನ ದಿಬ್ಬ ತೆರವು ಮಾಡುವ ಕಾರ್ಯ ಪೂರ್ಣಗೊಂಡಿದೆ.