ಉಡುಪಿ : ಉದ್ಯಮಿ ಇಂದ್ರಾಳಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ವಾದ- ಪ್ರತಿವಾದ ಕೆಲವು ದಿನಗಳಿಂದ ನಡೆಯುತ್ತಿದ್ದು, ಈ ಬಗ್ಗೆ ಅಂತಿಮ ತೀರ್ಪು ಮೇ 29ಕ್ಕೆ ಹೊರಬೀಳಲಿದೆ.
ಪ್ರಾಸಿಕ್ಯೂಷನ್ ಪರ ವಿಶೇಷ ಅಭಿಯೋಜಕ ಹಿರಿಯ ನ್ಯಾಯವಾದಿ ಎಂ ಶಾಂತರಾಮ ಶೆಟ್ಟಿ ಮತ್ತು ಆರೋಪಿಗಳಾದ ರಾಜೇಶ್ವರಿ ಶೆಟ್ಟಿ ಮತ್ತು ನವನೀತ ಶೆಟ್ಟಿ ಪರ ವಾದಕ್ಕಾಗಿ ಬೆಂಗಳೂರಿನ ಹಿರಿಯ ನ್ಯಾಯವಾದಿ ಬಿ.ವೆಂಕಟ್ ರಾವ್ ಭಟ್ , ಶ್ರೀನಿವಾಸ್ ಭಟ್ ಮತ್ತು ರಾಘವೇಂದ್ರ ಪರವಾಗಿ ಹಿರಿಯ ವಕೀಲ ವಿಕ್ರಮ ಹೆಗ್ಡೆ ವಾದ ಮಂಡಿಸಿದ್ದಾರೆ. ಆರೋಪಿಗಳ ಪೈಕಿ ೪ ನೇ ಆರೋಪಿ ಶ್ರೀನಿವಾಸ್ ಭಟ್ ಅವರು ನಿಧನ ಹೊಂದಿದ್ದಾರೆ.