ಪುತ್ತೂರು : ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎ.24ರಿಂದ 30ರವರೆಗೆ ನಡೆಯಬೇಕಿದ್ದ ಬ್ರಹ್ಮಕಲಶೋತ್ಸವವು ಕೋವಿಡ್-19ನ ಕಾರಣದಿಂದಾಗಿ ಮೂಂದೂಡಲಾಗಿದೆ ಎಂದು ಬ್ರಹ್ಮಕಲಶೋತ್ಸ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತಿಳಿಸಿದರು.
ಬ್ರಹ್ಮಕಲಶೋತ್ಸವಕ್ಕೆ ಪೂರ್ವ ತಯಾರಿ ಸುಮಾರು 6 ತಿಂಗಳುಗಳಿಂದ ನಡೆದು ಬಂದಿರುತ್ತದೆ.ಸುಮಾರು 25 ಸಾವಿರ ಆಮಂತ್ರಣ ಪತ್ರವನ್ನು ವಿತರಿಸಲಾಗಿದ್ದು, ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದೇವಿಯ ದೇವಸ್ಥಾನದ ಜೀರ್ಣೊದ್ಧಾರದ ಕೆಲಸ ಕಾರ್ಯ ನಡೆದಿದೆ. ಸುಮಾರು 40 ಸಮಿತಿಗಳನ್ನೊಳಗೊಂಡ ಬ್ರಹ್ಮಕಲಶ ಸಮಿತಿ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ.

ಪ್ರಚಾರ ಸಮಿತಿ ವತಿಯಿಂದ ಉಡುಪಿ, ಮಂಗಳೂರು, ಕಾಸರಗೋಡು ಹಾಗೂ ಇತರ ಜಿಲ್ಲೆಗಳಲ್ಲಿ ಆಮಂತ್ರಣ ವಿತರಿಸಿ ಪ್ರಚಾರ ನಡೆಸಿದ್ದು, ಸುಮಾರು 300 ಕ್ಕೂ ಅಧಿಕ ಬ್ಯಾನರ್,ಕಟೌಟುಗಳನ್ನು ಅಳವಡಿಸಲಾಗಿದ್ದು, ವಿಶೇಷವಾಗಿ ಸುಮಾರು 60 ಲಕ್ಷ ವೆಚ್ಚದಲ್ಲಿ ವೇದಿಕೆಯನ್ನು ರಚಿಸಲಾಗಿದ್ದು, ಸುಮಾರು 15 ಎಕ್ರೆ ಜಾಗದಲ್ಲಿ 20 ಸಾವಿರ ಜನರನ್ನು ಸುಧಾರಿಸುವ ವ್ಯವಸ್ಥೆಯಾಗಿತ್ತು.5 ಲಕ್ಷ ಜನರಿಗೇ ಅನ್ನಸಂತರ್ಪಣೆ ಮಾಡುವ ಉದ್ದೇಶದಿಂದ ಸುಮಾರು 7,8 ಎಕ್ರೆ ಜಾಗದಲ್ಲಿ ನಿಂತು ಊಟ ಮಾಡುವ ವ್ಯವಸ್ಥೆ,5 ಎಕ್ರೆ ಜಾಗದಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ 10 ಎಕ್ರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಮಾಡಲಾಗಿತ್ತು. ಪುತ್ತೂರಿನಿಂದ ಉಪ್ಪಿನಂಗಡಿ ವರೆಗೆ ಬಟ್ಟಿಂಗ್ಸ್ ಕಟ್ಟುವ ವ್ಯವಸ್ಥೆ, ಮೈಸೂರು ದಸರಾ ಮಾದರಿಯಲ್ಲಿ ದೀಪಾಲಂಕಾರ ಮಾಡಲಾಗಿತ್ತು, 150 ದೇವಸ್ಥಾನಗಳಿಗೆ ಭೇಟಿ ನೀಡಿ ಆಮಂತ್ರಣ ವಿತರಣೆಯನ್ನು ಮಾಡಲಾಗಿತ್ತು. ವಿಶಾಲವಾದ ಅನ್ನಛತ್ರ, ಪಾಕಶಾಲೆ, ಮುಂತಾದ ವ್ಯವಸ್ಥೆಗಳೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ನಡೆಸಲಾಗಿತ್ತು. ಕೊರೊನಾ ಕಾರಣದಿಂದಾಗಿ ಬ್ರಹ್ಮಕಲಶೋತ್ಸವ ಮೂಂದೂಡಲ್ಪಟ್ಟಿರುವುದು ಊರಿನವರ, ಅಪಾರ ಭಕ್ತರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯವವರ ಬೇಸರಕ್ಕೆ ಕಾರಣವಾಗಿದೆ.

ಅಧಿಕಾರಿಗಳು, ಸಮಿತಿಯವರು ಭಕ್ತಾಧಿಗಳು, ಹಿತ ಚಿಂತಕರು ನೀಡಿರುವ ಸಲಹೆಯ ಮೇರೆಗೆ ಬ್ರಹ್ಮಕಲಶ ಸಂದರ್ಭದಲ್ಲಿ ಎಲ್ಲಾ ಊರಿನವರು ಹಲವಾರು ಜನರು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಆ ನಿಟ್ಟಿನಿಂದ ಊರಿಗೆ ಬಂದಿರುವ ರೋಗದಿಂದ ಎಲ್ಲರಿಗೂ ಶೀಘ್ರವಾಗಿ ಮುಕ್ತಿ ದೊರೆಯಬೇಕು ಮಂದಿನ ದಿನಗಳಲ್ಲಿ ವಿಜೃಂಭಣೆಯಿಂದ ತಾಯಿಯ ಬ್ರಹ್ಮಕಲಶೋತ್ಸವನ್ನು ನಡೆಸಲಾಗುವುದು ಎಂದು ಅಶೋಕ್ ರೈ ಕೋಡಿಂಬಾಡಿಯವರು ತಿಳಿಸಿದರು.

