ಬೆಂಗಳೂರು : ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವಂತ ಆಕಾಶ್ ಭವನ್ ಶರಣ್ ವಿಚಾರಣೆಗಾಗಿ ಮಂಗಳೂರಿಗೆ ಕರೆ ತರುವಾಗ ತನ್ನ ಜೀವಕ್ಕೆ ಬಹಳ ಅಪಾಯವಿದೆ ತನ್ನ ಪ್ರಾಣ ರಕ್ಷಣೆಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಅನುಮತಿ ಕೋರಿ ಮುಖ್ಯ ನ್ಯಾಯಾಧೀಶರಿಗೆ ಪತ್ರಯೊಂದನ್ನು ಬರೆದಿರುತ್ತಾನೆ.
ಮಂಗಳೂರು ಆಕಾಶಭವನ ನಿವಾಸಿಯಾಗಿರುವಂತಹ ಶರಣ್ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ. ಸುಮಾರು 2 ವರ್ಷಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿಯಾಗಿ ಬಂಧಿತನಾಗಿದ್ದಾನೆ.
ಮಂಗಳೂರು ಹಾಗೂ ಮಂಗಳೂರಿನ ಸುತ್ತ ಮುತ್ತ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಅಥವಾ ಅಪರಾಧ ಕೃತ್ಯಗಳಲ್ಲಿ ವಿನಾಕಾರಣ ನನ್ನ ಹೆಸರು ಬಳಸಲಾಗಿದ್ದು ನನ್ನ ಮೇಲೆ ಸುಳ್ಳು ಕೇಸ್ ದಾಖಲಾಗುತ್ತಿದೆ. ಇದರಿಂದಾಗಿ ನನ್ನ ಮೇಲೆ ಬಾಡಿ ವಾರೆಂಟ್ ಜಾರಿಯಾಗಿದ್ದು ವಿಚಾರಣೆ ನೆಪದಲ್ಲಿ ನನ್ನನ್ನು ದಾರಿ ಮಧ್ಯೆದಲ್ಲಿ ಏನ್ ಕೌಂಟರ್ ಮಾಡುವ ಸಂಚನ್ನು ರೂಪಿಸಿರುತ್ತಾರೆ. ಅದಲ್ಲದೆ ನನ್ನನ್ನು ದಾರಿ ಮಧ್ಯದಲ್ಲಿ ಕೊಲೆ ಮಾಡಲು ಮುಂಬೈ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಹಾಗೂ ಅವರ ಸಹಚರರು ಸಂಚು ರೂಪಿಸುತ್ತಿದ್ದು, ದಾವೂದ್ ಇಬ್ರಾಹಿಂ ನ ಸಹಚರ ಮಾಡೂರು ಇಸುಬು ಎಂಬವನ ಕೊಲೆ ಪ್ರತಿಕಾರಕ್ಕಾಗಿ ನನ್ನನ್ನು ಕೊಲೆ ಮಾಡಲು ಛೋಟಾ ಶಕೀಲ್ ನ ಸಹಚರನಾದ ರಶೀದ್ ಮಲಬಾರಿ ಹಾಗೂ ಇತರರು ಸಂಚನ್ನು ರೂಪಿಸಿದ್ದಾರೆ. ಪೊಲೀಸರಿಂದ ಹಾಗೂ ವಿರೋಧೀಗಳಿಂದ ನನ್ನ ಜೀವಕೆ ಅಪಾಯವಿದ್ದು ನನಗೆ ಜೀವ ರಕ್ಷಣೆ ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾನೆ.
ನನ್ನನ್ನು ಮಂಗಳೂರಿಗೆ ಕರೆ ತರುವಾಗ ನನ್ನ ಜೀವಕ್ಕೆ ಬಹಳ ಅಪಾಯವಿದ್ದು ಆದ್ದರಿಂದ ವಿಚಾರಣೆಯನ್ನು ಕೇಂದ್ರ ಕಾರಾಗೃಹದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಬೇಕಾಗಿ ಪತ್ರದ ಮೂಲಕ ಮುಖ್ಯ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದ್ದಾನೆ.