ಕೇರಳದ ಪೆಟ್‌ಶಾಪ್‌ವೊಂದರಿಂದ 15 ಸಾವಿರ ಬೆಲೆಯ ನಾಯಿ ಮರಿಯನ್ನು ಕದ್ದ ಇಬ್ಬರು ಇಂಜಿನಿಯರ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಶನಿವಾರ ಈ ಘಟನೆ ನಡೆದಿದೆ.

ಕದ್ದ ಆರೋಪದಡಿ ಉಡುಪಿ ಮೂಲದ ಇಬ್ಬರು ಇಂಜಿನಿಯರ್ ವಿದ್ಯಾರ್ಥಿಗಳಾದ ನಿಖಿಲ್ ಮತ್ತು ಶ್ರೇಯಾಳನ್ನು ಪೊಲೀಸರು ಬಂಧಿಸಿದ್ದಾರೆ.
ನಿಖಿಲ್ ಮತ್ತು ಶ್ರೇಯಾ ಬೆಕ್ಕು ಮಾರುವ ನೆಪದಲ್ಲಿ ಕೇರಳದ ನೆಟ್ಟೂರಿನಲ್ಲಿರುವ ಪೆಟ್‌ಶಾಪ್‌ಗೆ ಬೈಕ್‌ನಲ್ಲಿ ಬಂದಿದ್ದರು. ಬಳಿಕ ಪೆಟ್‌ಶಾಪ್ ಮಾಲೀಕನೊಂದಿಗೆ ಬೆಕ್ಕು ಮಾರುವ ಕುರಿತು ಮಾತನಾಡಿದ್ದಾರೆ. ಹೀಗೆ ಮಾತನಾಡುತ್ತಾ, ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದ ವಿದ್ಯಾರ್ಥಿಗಳು ಪಂಜರದಲ್ಲಿ ಇಟ್ಟಿದ್ದ ನಾಯಿಮರಿಯನ್ನು ಶ್ರೇಯಾ ಕದ್ದಿದ್ದಾಳೆ. ಯಾರಿಗೂ ತಿಳಿಯದಂತೆ ನಿಖಿಲ್‌ನ ಹೆಲ್ಮೆಟ್ ಒಳಗೆ ಹಾಕಿ ಬಚ್ಚಿಟ್ಟಿದ್ದಾಳೆ.

ಶಾಪ್ ಮಾಲೀಕ ಮೂರು ನಾಯಿ ಮರಿಗಳನ್ನು ಮಾರಾಟ ಮಾಡಲೆಂದು ಬೇರೆಡೆಯಿಂದ ಖರೀದಿಸಿ ತನ್ನ ಶಾಪ್‌ಗೆ ತಂದಿಟ್ಟಿದ್ದನು. ಅದರಲ್ಲಿ ಒಂದು ಮರಿಯನ್ನು ಆಲಪ್ಪುರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಮುಂದಾಗಿದ್ದನು. ಅಷ್ಟು ಮಾತ್ರವಲ್ಲದೆ, ಅಡ್ವಾನ್ಸ್ ಕೂಡ ತೆಗೆದುಕೊಂಡಿದ್ದನು.
ಶನಿವಾರದಂದು ವ್ಯಕ್ತಿ ನಾಯಿ ಮರಿಯನ್ನು ಖರೀದಿಸಲು ಬಂದಾಗ ಅಂಗಡಿ ಮಾಲೀಕ ಅದರ ಗೂಡಿನ ಬಳಿ ಹೋಗುತ್ತಾನೆ. ಆದರೇ ಈ ವೇಳೆ ನಾಯಿ ಮರಿ ಇಲ್ಲದಿರುವುದನ್ನು ಕಂಡು ಶಾಕ್ ಆಗುತ್ತಾನೆ. ಬಳಿಕ ಸಿಸಿಟಿವಿ ನೋಡಿದಾಗ ನಿಖಿಲ್ ಮತ್ತು ಶ್ರೇಯಾ ಕದ್ದಿರುವುದಾಗಿ ತಿಳಿಯುತ್ತದೆ.
ಮಾಲೀಕ ಪೊಲೀಸರಿಗೆ ನೀಡಿದ ದೂರಿನನ್ವಯ ನಿಖಿಲ್ ಮತ್ತು ಶ್ರೇಯಾಳನ್ನು ಪೊಲೀಸರು ಬಂಧಿಸಿದ್ದಾರೆ..