ದೇಶದಲ್ಲೇ ಮೊದಲ ಬಾರಿಗೆ ತೃತೀಯಲಿಂಗಿ ಗರ್ಭ ಧರಿಸಿರುವ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಈ ಹಿಂದೆ ಗರ್ಭಧಾರಣೆ ಎಂಬುದು ಹೆಣ್ಣು ಮಾತ್ರ ಈ ಭಾಗ್ಯವನ್ನು ಪಡೆದಿರುತ್ತಾಳೆ. ಆದರೆ ಈಗ ತಂತ್ರಜ್ಞಾನ ಮುಂದುವರಿಕೆಯಿಂದ ಯಾರು ಬೇಕಾದರೂ ಗರ್ಭಧಾರಣೆ ಮಾಡಿಸಿಕೊಳ್ಳಬಹುದು. ಜಗತ್ತಿನಲ್ಲಿ ಇಂತಹ ಅನೇಕ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಇದೀಗ ಇಂತಹದೇ ಒಂದು ಘಟನೆ ಭಾರತದಲ್ಲೂ ನಡೆದಿದೆ.
ಇದೀಗ ದೇಶದ ಮೊದಲ ಟ್ರ್ಯಾನ್ಸ್ಜೆಂಡರ್ ಗರ್ಭಧಾರಣೆ ಪಡೆದಿದ್ದಾರೆ. ಅಂದರೆ ಮೊದಲ ಬಾರಿಗೆ ದೇಶದಲ್ಲಿ ಮಂಗಳಮುಖಿಯರು ಗರ್ಭಧಾರಣೆ ಮಾಡಿಕೊಂಡು, ಫೋಟೋಶೂಟ್ ಮಾಡಿಕೊಂಡಿದ್ದಾರೆ.
ಜಿಯಾ ಪಾವಲ್ ಅವರು ಪುರುಷ ಸಂಗಾತಿಯ ಮೆಟರ್ನಿಟಿ ಫೋಟೋಶೂಟ್ ಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಜಹಾದ್ ಫಾಜಿಲ್ ಮತ್ತು ಜಿಯಾ ಪಾವಲ್ ದಂಪತಿಯ ಪುರುಷ ಸಂಗಾತಿ ಫಾಜಿಲ್ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿರುವ ಜಹಾದ್ ಅವರು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ದಂಪತಿಗಳ ಮೆಟರ್ನಿಟಿಯ ಫೋಟೋಶೂಟ್ ಚಿತ್ರಗಳನ್ನು ಭಾವನಾತ್ಮಕ ಶೀರ್ಷಿಕೆಯಡಿಯಲ್ಲಿ ಜಿಯಾ ಪಾವಲ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿಕೊಂಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..