ರಾಜ್ಯದಲ್ಲಿ ಎಲೆಕ್ಷನ್ ಹಬ್ಬಕ್ಕೆ ರಾಜಕಾರಣಿಗಳು ಪ್ರಚಾರದ ಭರಾಟೆ ಜೋರಾಗಿದೆ. ಕೇಂದ್ರದ ಬಿಜೆಪಿ ನಾಯಕರು ಒಬ್ಬರ ಹಿಂದೆ ಒಬ್ಬರಂತೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದರ ಮಧ್ಯೆಯೇ ಬೆಂಗಳೂರಿನಲ್ಲಿ 14ನೇ ಏರ್ ಇಂಡಿಯಾ ಶೋವಿದೆ. ಇದರ ಉದ್ಘಾಟನೆ ಮಾಡಲೆಂದು ಈಗಾಗಲೇ ಮೋದಿಯವರು ಒಂದು ದಿನ ಮೊದಲೇ ಬಂದು ರಾಜಭವನದಲ್ಲಿ ತಂಗಿದ್ದರು. ಪ್ರಧಾನಿಯವರ ಜೊತೆ ಔತಣಕೂಟಕ್ಕೆಂದು ಕೆಲ ಗಣ್ಯರನ್ನ ಆಹ್ವಾನಿಸಲಾಗಿತ್ತು.
ಈ ಔತಣಕೂಟಕ್ಕೆ ಉದ್ಯಮಿಗಳು, ರಾಜಕಾರಣಿಗಳು, ಕ್ರಿಕೆಟಿಗರು ಹಾಗೂ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು.
ಪ್ರಧಾನಿ ಮೋದಿಯವರ ಜೊತೆ ರಾಜಭವನದಲ್ಲಿ ನಟ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು, ನಟ-ನಿರ್ದೇಶಕ ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಕೆಲ ಕಾಲ ಚರ್ಚೆ ನಡೆಸಿದರು.
ಮೋದಿಯವರು ಎಲ್ಲೇ ಹೋಗಲಿ ಸಿನಿಮಾ, ಕ್ರಿಕೆಟ್ ಹಾಗೂ ಉದ್ಯಮಿಗಳ ಜೊತೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಈ ಹಿಂದೆಯೂ ಬಾಲಿವುಡ್ ಸಿನಿ ತಾರೆಗಳನ್ನ ಕರೆಸಿ ಔತಣ ಕೂಟ ನೀಡಿದ್ದರು.
ಇದೀಗ ಸ್ಯಾಂಡಲ್‌ವುಡ್ ಗಣ್ಯರನ್ನ ಆಹ್ವಾನಿಸಿರುವುದು ವಿಶೇಷತೆಗೆ ಕಾರಣವಾಗಿದೆ.
ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ದಂಪತಿ, ಮಯಾಂಕ್ ಅಗರ್‌ವಾಲ್, ಮನೀಷ್ ಪಾಂಡೆ, ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್ ಹಾಗೂ ಉದ್ಯಮಿಗಳಾದ ತರುಣ್ ಮೆಹ್ರಾ ಹಾಗೂ ನಿತಿನ್ ಕಾಮತ್ ಡಿನ್ನರ್‌ನಲ್ಲಿ ಭಾಗಿಯಾಗಿದ್ದಾರೆ.
ಎಲ್ಲಾ ಗಣ್ಯರು ಕೆಲ ಸಮಯ ಮೋದಿಯವರ ಜೊತೆ ಚರ್ಚೆ ನಡೆಸಿದ್ದಾರೆ. ನಂತರ ಏರ್ಪಡಿಸಲಾಗಿದ್ದ ಔತಣಕೂಟವನ್ನು ಮೋದಿಯವರ ಜೊತೆ ಕೂತು ಸವಿದಿದ್ದಾರೆ. ಇನ್ನು ಎಲೆಕ್ಷನ್ ಟೈಮ್‌ನಲ್ಲಿ ರಾಜ್ಯಕ್ಕೆ ಮೋದಿ ಆಗಮನ ಹಾಗೂ ಡಿನ್ನರ್‌ಗೆಂದು ಗಣ್ಯರನ್ನ ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ…