ಬಂಟ್ವಾಳ: ಶ್ರೀ ದುರ್ಗಾಪರಮೇಶ್ವರೀ ಭಕ್ತವೃಂದ ಸಜೀಪಮಾಗಣೆ ವತಿಯಿಂದ ಸಪ್ತಮ ವರ್ಷದ ಯಕ್ಷಗಾನ ಬಯಲಾಟ ‘ಶ್ರೀ ದೇವಿ ಮಹಾತ್ಮೆ’ ಫೆ.26 ರಂದು ಸಜೀಪಮೂಡ ಪೆಲತ್ತಕಟ್ಟೆ ಮೈದಾನದಲ್ಲಿ ನಡೆಯಲಿದೆ.
ಫೆ.26 ರಂದು ಸಂಜೆ 5.45 ರಿಂದ ಸಜೀಪಮೂಡದ ಪೆಲತ್ತಕಟ್ಟೆ ಮೈದಾನ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಪುಣ್ಯ ಕಥಾಭಾಗವನ್ನು ಸಪ್ತಮ ವರ್ಷದ ಸೇವಾ ಬಯಲಾಟವಾಗಿ ಆಡಿತೋರಿಸಲಿದ್ದಾರೆ.
ಸಂಜೆ 3 ಗಂಟೆಗೆ ಸಜೀಪ ಮುನ್ನೂರು ಯುವಕ ಸಂಘ ರಿ. ಕಂದೂರು ಇಲ್ಲಿಂದ ಪೆಲತ್ತಕಟ್ಟೆಗೆ ನವಜೀವನ ವ್ಯಾಯಾಮ ಶಾಲೆ, ನಾಗನವಳಚ್ಚಿಲ್ ಇವರಿಂದ ತಾಲೀಮ್ ಪ್ರದರ್ಶನ ಹಾಗೂ ಮಾಗಣೆಯ ಸಂಘ-ಸಂಸ್ಥೆಗಳಿಂದ ಭಜನೆ, ಚೆಂಡೆ, ಬ್ಯಾಂಡ್ ವಾದನ ಹಾಗೂ ಸುಡುಮದ್ದು ಪ್ರದರ್ಶನಗಳೊಂದಿಗೆ ಮೇಳದ ದೇವರ ಭವ್ಯ ಮೆರವಣಿಗೆ ನಡೆಯಲಿದೆ.
ಸಂಜೆ ಧಾರ್ಮಿಕ ಪ್ರಬೋಧನಾ ಸಭಾ ನಡೆಯಲಿದೆ. ದೀಪೋಜ್ವಲನ ಹಾಗೂ ಆಶೀರ್ವಾದವನ್ನು ಶ್ರೀ ಶ್ರೀ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಸ್ವಾಮೀಜಿ ನಿರ್ವಹಿಸಲಿದ್ದಾರೆ. ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣರು ದಿವ್ಯ ಉಪಸ್ಥಿತಿಯನ್ನು ವಹಿಸಲಿದ್ದಾರೆ.
ಸಂಜೆ ಚೌಕಿ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..