ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದಕ್ಕೆ ಬರೋಬ್ಬರಿ 200 ಕೆಜಿ ಗೂ ಅಧಿಕ ತೂಕ ತೂಗುವ ಮೀನೊಂದು ಬಿದ್ದಿದೆ.
ಶಾಂಭವಿ ಎನ್ನುವ ಹೆಸರಿನ ಬೋಟ್ ನ ಮೀನುಗಾರರಿಗೆ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ಈ ದೈತ್ಯ ಮೀನು ಸೆರೆ ಸಿಕ್ಕಿದೆ.
ಸ್ಥಳೀಯವಾಗಿ ಈ ಮೀನಿಗೆ ‘ಕಟ್ಟೆ ಕೊಂಬು ಮೀನು’ ಎಂದು ಕರೆಯಲಾಗುತ್ತಿದ್ದು, ಕೆಜಿಗೆ ಸುಮಾರು 250 ರೂಪಾಯಿ ನಷ್ಟು ಬೆಲೆ ಇದೆ ಅನ್ನುವ ಮಾಹಿತಿ ಇದೆ. ಈ ಜಾತಿಯ ಸಣ್ಣ ಮೀನಿಗೆ ಇರುವಷ್ಟು ರೇಟ್ ದೊಡ್ಡ ಮೀನಿಗೆ ಇಲ್ಲ ಎನ್ನಲಾಗಿದೆ. ಆದರೆ ಈ ದೈತ್ಯ ಮೀನನ್ನು ಕ್ರೇನ್ ಮೂಲಕ ವಿಲೇವಾರಿ ಮಾಡಿದ್ದು, ಮಲ್ಪೆಯಲ್ಲಿ ಸೇರಿದ್ದ ಮತ್ಸ್ಯ ಪ್ರಿಯರ ಗಮನ ಸೆಳೆಯಿತು.
ಸದ್ಯ ಕ್ರೇನ್ ಮೂಲಕ ಬೋಟ್ ನಿಂದ ಹೊರತೆಗೆದ ಈ ಮೀನಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..