ವಿಟ್ಲ: ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಕೇರಳದ ಕೊಯಿಲಾಂಡಿ ನಿವಾಸಿ ಸುರೇಶ್ ಬಾಬು (ಸೂರಿ) ಬಂಧಿತ ಆರೋಪಿ.
ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಈ ಬಗ್ಗೆ ವಾರೆಂಟ್ ಜಾರಿಯಾಗಿ ಪತ್ತೆಯಾಗಿದ್ದು, ಆರೋಪಿಯನ್ನು ಎಎಸ್ಐ ಜಯರಾಮ ಎಂಬವರು ಕೇರಳ ರಾಜ್ಯದ ಕೊಯಿಲಾಂಡಿಯ ವಾರಾಂಗೀಲ್ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ..