ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ರವರು ಪ್ರಬುದ್ಧ ರಾಜಕಾರಣಿ,, ಸಿದ್ದರಾಮಯ್ಯ ವಿರುದ್ಧ ದ್ವೇಷದ ಕಿಚ್ಚು ಹಚ್ಚಿಸುವ ಮಾತುಗಳನ್ನಾಡಿರುವುದರ ಬಗ್ಗೆ ಸುಳ್ಯ ವಿಧಾನ ಸಭಾದ ಟಿಕೆಟ್ ಆಕಾಂಕ್ಷಿ ಪ್ರಹ್ಲಾದ್ ಬೆಳ್ಳಿಪ್ಪಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿಪ್ಪುಸುಲ್ತಾನ್ ನನ್ನು ಹೊಡೆದುರುಳಿಸಿದ ರೀತಿಯಲ್ಲಿ ಸಿದ್ದರಾಮಯ್ಯರನ್ನು ಹೊಡೆದುರುಳಿಸಬೇಕು ಎಂಬ ಭಾಷಣ ಮಾಡಿರುವುದು ಆತಂಕಕಾರಿಯಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ಜನಪರ ಸೇವೆ ಮಾಡುತ್ತಾ ವ್ಯಕ್ತಿತ್ವ ಬೆಳೆಸಿಕೊಂಡ ವ್ಯಕ್ತಿಯಾಗಿದ್ದಾರೆ ಅವರ ಬಗ್ಗೆ ಈ ರೀತಿಯ ಮಾತುಗಳನ್ನಾಡುವುದು ಒಳ್ಳೆಯ ವಿಚಾರವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.