ಪುತ್ತೂರು: ದ್ವಾರಕಾ ಪ್ರತಿಪ್ಠಾನ ರಿ. ‘ದ್ವಾರಕೋತ್ಸವ-III’ ಕಾರ್ಯಕ್ರಮ ಫೆ.19 ರಂದು ಮುಕ್ರಂಪಾಡಿಯ ಗೋಕುಲ ಬಡಾವಣೆಯ ‘ನಂದಗೋಕುಲ ವೇದಿಕೆ’ಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಹರಿನಾರಾಯಣ ಮಾಡಾವು ರವರು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಅರುಣ್ ಕುಮಾರ್ ಪುತ್ತಿಲ ರವರು ಉದ್ಘಾಟಿಸಲಿದ್ದಾರೆ. ‘ನೆಮ್ಮದಿ ಮನೆ’ ಹಸ್ತಾಂತರವನ್ನು ಪುತ್ತೂರು ವಿದ್ಯಾಮಾತಾ ಅಕಾಡೆಮಿಯ ಸಂಸ್ಥಾಪಕರು ಮತ್ತು ನಿರ್ದೇಶಕರಾದ ಭಾಗ್ಯೇಶ್ ಎ.ಕೆ. ರವರು ಮಾಡಲಿದ್ದಾರೆ. ಕೆಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಈಶ್ವರ ಭಟ್ ಎಳ್ಯಡ್ಕ ರವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.
ಗೋವಿಂದ ಭಟ್ ಮಿಂಚಿನಡ್ಕ ಮತ್ತು ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ರವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಯಿಂದ ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೂಷಣ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.