ನಂದನ ಪುತ್ತೂರು ಚಿಟ್ಸ್ ಪ್ರೈವೆಟ್ ಲಿ. ನೂತನ ಶಾಖೆಯು ಮಂಗಳೂರಿನ ಕರಂಗಲ್ಪಾಡಿ ಲೋಟಸ್ ಪ್ಯಾರಡೈಸ್ ಸೆಂಟರ್ ನಲ್ಲಿ ಫೆ.18 ರಂದು ಶುಭಾರಂಭಗೊಳ್ಳಲಿದೆ.
ನೂತನ ಶಾಖೆಯನ್ನು ಶಾಸಕರಾದ ವೇದವ್ಯಾಸ ಕಾಮತ್ ರವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದನ ಪುತ್ತೂರು ಚಿಟ್ಸ್ ಪ್ರೈವೆಟ್ ಲಿ. ಅಧ್ಯಕ್ಷರಾದ ಚಂದ್ರಶೇಖರ ಎಸ್. ರವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ಮಾಜಿ ಮೇಯರ್ ಜಸೀಂತಾ ವಿಜಯ್ ಅಲ್ಫ್ರೆಡ್, ಲೋಟಸ್ ಪ್ಯಾರಡೈಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಜೀತೆಂದ್ರ ಕೊಟ್ಟಾರಿ, ಔರಾ ಕನ್ಸ್ಟ್ರಕ್ಷನ್ ಮ್ಯಾನೇಜಿಂಗ್ ಡೈರೆಕ್ಟರ್ ಸುಕುಮಾರ್ ರವರು ಆಗಮಿಸಲಿದ್ದಾರೆ ಎಂದು ಉಪಾಧ್ಯಕ್ಷ ದಾಮೋದರ ಪಾಟಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

