ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ಶ್ರೀ ನಾಗ ದೇವರ ಸನ್ನಿಧಿಯಲ್ಲಿ 20ನೇ ವರ್ಷದ ವಾರ್ಷಿಕ ಮಹಾಪೂಜೆ ಫೆ.24 ರಂದು ನಡೆಯಲಿದೆ.
ಬ್ರಹ್ಮಶ್ರೀ ಕೇಶವ ಜೋಗಿತ್ತಾಯರ ಶುಭಾಶೀರ್ವಾದಗಳೊಂದಿಗೆ ನೆಲ್ಲಿಕಟ್ಟೆ ನಾಗ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆದುಕೊಂಡು ಬರುತ್ತಿರುವ ವಾರ್ಷಿಕ ಮಹಾಪೂಜೆ ಫೆ.24 ರಂದು ನಡೆಯಲಿದೆ.
ಬೆಳಿಗ್ಗೆ 8 ಗಂಟೆಗೆ ಆಶ್ಲೇಷ ಬಲಿ, ನಾಗ ತಂಬಿಲ, ಮಹಾಪೂಜೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

