ಉಪ್ಪಿನಂಗಡಿ : ಸಮೀಪದ ಕೆಮ್ಮಾರದಲ್ಲಿ ಇಂದು ಮರಾಠಿ ಭಾಷೆ ಮಾತನಾಡುತ್ತಿದ್ದ ಇಬ್ಬರು ಮಹಿಳೆಯರು ಮೈಸೂರಿನ ಆಶ್ರಮವೊಂದಕ್ಕೆ ದಾನ ಮಾಡಲು ಹಣ, ಬಟ್ಟೆಬರೆಗಳನ್ನು ನೀಡುವಂತೆ ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಕೊಯಿಲ ಎಂಬವರ ಮನೆಗೆ ತೆರಳಿ ಒತ್ತಾಯಿಸಿರುತ್ತಾರೆ.
ಈ ವೇಳೆ ಅನುಮಾನ ಬಂದು ಐಡಿ ಕಾರ್ಡ್ ತೋರಿಸುವಂತೆ ಹೇಳಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಬಳಿಕ ಅವರಲ್ಲಿ ಇದ್ದ ಆಶ್ರಮದ ಮಾಹಿತಿಯ ಕರಪತ್ರದಲ್ಲಿ ಆ ಆಶ್ರಮದ ಅಧ್ಯಕ್ಷ ಎಸ್. ಕೆ. ರಮೇಶ್ ಎಂಬವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಈ ಮಹಿಳೆಯರು ಆ ಸಂಸ್ಥೆಯವರು ಅಲ್ಲ ಎಂದು ಹೇಳಿ, ಅವರಲ್ಲಿದ್ದ ಕರ ಪತ್ರ ಹಾಗೂ ಅವರು ಬಚ್ಚಿಟ್ಟಿದ್ದ ಐಡಿ ಕಾರ್ಡ್ ಒಂದನ್ನು ವಶಪಡಿಸಿಕೊಳ್ಳಲು ಹೇಳಿದ್ದಾರೆ.
ವಶಪಡಿಸಿಕೊಂಡ ಬಳಿಕ ಅಲ್ಲಿಂದ ಆ ಮಹಿಳೆಯರು ಕಾಲ್ಕಿತ್ತಿದ್ದಾರೆ. ಈ ಘಟನೆಯಿಂದಾಗಿ ಇನ್ನಷ್ಟು ಮಂದಿ ಮೋಸಹೋಗುವುದು ತಪ್ಪಿದಂತಾಗಿದೆ.