ಬೆಳ್ಳಾರೆ: 2022ರ ಜುಲೈ ತಿಂಗಳಿನಲ್ಲಿ ಬೆಳ್ಳಾರೆಯಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟ ಯುವಕ ಮಸೂದ್ ಕುಟುಂಬಕ್ಕೆ ದಕ-ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಸಮಿತಿ ಹಾಗೂ ಸುಳ್ಯ ಜಮಾ-ಅತ್ ಸಮಿತಿ ವತಿಯಿಂದ ನಿರ್ಮಿಸಲಾದ ನೂತನ ಮನೆ ಹಸ್ತಾಂತರ ಮಾಡಲಾಯಿತು.

ಸೆಂಟ್ರಲ್ ಕಮಿಟಿ ವತಿಯಿಂದ 30 ಲಕ್ಷ ಹಾಗೂ ಸ್ಥಳೀಯ ಸರ್ವ ಧರ್ಮದ ದಾನಿಗಳ ನೆರವಿನಿಂದ ನಿರ್ಮಿಸಿದ ಮನೆ ಇದಾಗಿದೆ.
ಕೊಲೆಯಾದ ಮಸೂದ್ ಮೂಲತಃ ಕಾಸರಗೋಡು ಮೊಗ್ರಾಲ್ ಪುತ್ತೂರು ನಿವಾಸಿ.
ಬೆಳ್ಳಾರೆ ಸಮೀಪದ ಕಳಂಜ ಬಳಿಯಿರುವ ಅಜ್ಜನ ಮನೆಗೆ ಬಂದು ನೆಲೆಸಿದ್ದು, ಅಲ್ಲಿಂದಲೇ ಕೆಲಸಕ್ಕೂ ತೆರಳುತ್ತಿದ್ದ.
2022ರ ಜು.19 ರಂದು ರಾತ್ರಿ ತಂಡವೊಂದರ ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡಿದ್ದ ಮಸೂದ್ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.