ವಿಟ್ಲ: ದೇಶಾದ್ಯಂತ ಎರಡನೇ ಅಲೆಯ ಮುಖಾಂತರ ದಿನದಿಂದ ದಿನಕ್ಕೆ ಶರವೇಗದಲ್ಲಿ ಕಾಣುತ್ತಿರುವ ಕೊರೋನ ಎಂಬ ಮಹಾಮಾರಿ ರೋಗದಿಂದ ದೇಶದಲ್ಲಿ ರಾಜ್ಯದಲ್ಲಿ ಸರಿಯಾದ ಚಿಕಿತ್ಸೆ ದೊರೆಯದೇ ಲಕ್ಷಾಂತರ ಜನರು ಕೊರೋನಕ್ಕೆ ಬಲಿಯಾಗುತ್ತಿದ್ದು ಇದಕ್ಕೆ ನೇರವಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವೈಫಲ್ಯವೇ ಕಾರಣವಾಗಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಮೊದಲು ಬಂದ ಕೋವಿಡ್- 19 ಅನೇಕ ಸಾವು ನೋವುಗಳು ಸಂಭವಿಸಿದರೂ ತದನಂತರ ಕೋವಿಡ್ -19 ರೋಗವು ನಿಧಾನವಾಗಿ ಕಡಿಮೆಯಾದರೂ ತದನಂತರ ಇಡೀ ಆರೋಗ್ಯ ಇಲಾಖೆ ವಿವಿಧ ವೈದ್ಯರುಗಳು ಸರಕಾರಕ್ಕೆ ಎರಡನೆಯ ಕೊರೋನ ಅಲೆಯ ಬಗ್ಗೆ ಎಚ್ಚರಿಕೆ ನೀಡಿತ್ತು ಆದರೂ ಸರಕಾರ ಇವುಗಳ ಬಗ್ಗೆ ಗಮನ ಹರಿಸದೇ ಚುನಾವಣಾ ಪ್ರಚಾರಗಳು ಅಪರೇಶನ್ ಕಮಲಗಳು ಮುಂತಾದವುಗಳನ್ನು ಮಾಡಿಕೊಂಡು ದೇಶದಲ್ಲಿ ಅಧಿಕಾರ ಹಿಡಿಯುವ ಕನಸು ಕಂಡಿದೆ ಹೊರತು ದೇಶದ ಜನಸಾಮಾನ್ಯರ ಆರೋಗ್ಯದ ಮೇಲೆ ಕಾಳಜಿ ವಹಿಸದಿರುವುದು ಅತ್ಯಂತ ಖೇದಕರವಾಗಿದೆ ಎಂದು ಅವರು ಹೇಳಿದರು.
ಪ್ರಸ್ತುತವಾಗಿ ದೇಶದಲ್ಲಿ ಕೊರೋನ ವೈರಸ್ ರೋಗಕ್ಕೆ ದೇಶದ ವಿವಿಧ ಮೂಲೆಗಳಲ್ಲಿ ಬೀದಿ ಬೀದಿಗಳಲ್ಲಿ ರಸ್ತೆಗಳಲ್ಲಿ ಜನಸಾಮಾನ್ಯರು ನರಳಿ ನರಳಿ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ದೇಶದ ದುರಂತ ಎಂದು ನಾವು ಭಾವಿಸಬೇಕಾಗಿದೆ ಎಂದರು. ಒಂದು ಕಡೆಯಲ್ಲಿ ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲ ಬೆಡ್ ವ್ಯವಸ್ಥೆ ಇಲ್ಲ ಆಮ್ಲಜನಕ ವ್ಯವಸ್ಥೆ ಇಲ್ಲ ಗ್ಯಾಸ್ ವ್ಯವಸ್ಥೆ ಇಲ್ಲ ಇದರಿಂದಾಗಿ ಸರಕಾರದ ವೈಫಲ್ಯದಿಂದಾಗಿ ಲಕ್ಷಾಂತರ ಸಾವಿರಾರು ಮಂದಿ ದಿನದಲ್ಲಿ ಸರಿಯಾದ ಚಿಕಿತ್ಸೆ ದೊರೆಯದೇ ಸಾವನ್ನುಪ್ಪುತ್ತಿರುವುದು ಅತ್ಯಂತ ಕಳವಳಕಾರಿಯಾದ ಘಟನೆಯಾಗಿದೆ ಎಂದರು. ಕರ್ನಾಟಕ ರಾಜ್ಯದಲ್ಲಿ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕಕಾರಿಯಾಗಿದೆ ಎಂದರು.
ಈಗಾಗಲೇ ಮದ್ಯಂತರ ಲಾಕ್ ಡೌನ್ ಮಾಡಿರುವ ಸರಕಾರದ ಕ್ರಮ ಸರಿಯಾದ ಕ್ರಮವಲ್ಲ ಕೊರೋನ ಕಡಿಮೆಯಾಗಲು ಲಾಕ್ ಡೌನ್ ಪರಿಹಾರವಲ್ಲ, ಸರಕಾರದ ವೈಫಲ್ಯದಿಂದ ಇಷ್ಟೆಲ್ಲಾ ಸಮಸ್ಯೆ ರೋಗ ಅತಿಯಾಗಲು ಕಾರಣವಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಮುಖಂಡ ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ಆಕ್ರೋಶ ಹೊರಹಾಕಿದ್ದಾರೆ.