ವಿಟ್ಲ: ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಮದ್ಯದ ಫ್ಯಾಕೇಟ್ ಗಳು ಅಂಗಡಿ ಸಮೀಪ ಬಿದ್ದಿರುವುದನ್ನು ಗಮನಿಸಿದ ವಿಟ್ಲ ಪೊಲೀಸರು ದಾಳಿ ನಡೆಸಿದಾಗ ಅನಂತಾಡಿ ಗ್ರಾಮದ ದರ್ಖಾಸುವಿನಲ್ಲಿ 6 ಲೀಟರ್ ಮಧ್ಯ ಪತ್ತೆಯಾಗಿದೆ.
ಬೀಡಿ ಖರೀದಿ ಅಂಗಡಿ ಮಾಲೀಕ ಅನಂತಾಡಿ ದರ್ಖಾಸು ನಿವಾಸಿ ಚಂದ್ರಹಾಸ(25) ಬಂದಿತ.ವಿಟ್ಲ ಪಿ ಎಸ್ ಐ ವಿನೋದ್ ರೆಡ್ಡಿ ಹಾಗೂ ಪ್ರೋಬೆಷನರಿ ಪಿಎಸ್‌ಐ ಮಂಜುನಾಥ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಸನ್ನ, ಪ್ರತಾಪ್ ರೆಡ್ಡಿ, ವಿನಾಯಕ ರವರ ತಂಡ ಚಂದ್ರಹಾಸ ಎಂಬಾತನ ಅಂಗಡಿಯ ಆಸುಪಾಸಿನಲ್ಲಿ ಖಾಲಿಯಾದ ಮಧ್ಯದ ಫ್ಯಾಕೇಟ್‌ಗಳು ಅಲ್ಲಲ್ಲಿ ಬಿದ್ದಿರುವುದು ಕಂಡಿದ್ದು, ಅಂಗಡಿಯಲ್ಲಿ ಮದ್ಯ ಸಂಗ್ರಹ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ವಿಚಾರಿಸಿದಾಗ ಅಂಗಡಿ ಹಿಂಬದಿಯಲ್ಲಿ ರಟ್ಟಿನ ಬಾಕ್ಸ್‌ನಲ್ಲಿ ಮದ್ಯ ಪತ್ತೆಯಾಗಿದೆ.
67 ಮೈಸೂರು ಲ್ಯಾನ್ಸರ್ ಕಂಪನಿಯ 90 ಎಂಎಲ್‌ನ ಟೆಟ್ರಾ ಪ್ಯಾಕೇಟ್ ಜತೆಗೆ ಗಿರಾಕಿಗಳಿಂದ ಪಡೆದ 150 ರೂ ಹಣ ಪತ್ತೆಯಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.