ಪುತ್ತೂರು : ದೇಶದಾದ್ಯಂತ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ ಸರ್ಕಾರ ವೀಕೆಂಡ್ ಕರ್ಫ್ಯೂ ಅನ್ನು ಜಾರಿಗೊಳಿಸಿದೆ.
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ನಿರ್ಬಂಧಗಳನ್ನೂ ವಿಧಿಸಿದೆ. ಈ ನಿರ್ಬಂಧಗಳನ್ನು ಅನುಸರಿಸಿಕೊಂಡು, ಕೊರೊನಾ ನಿಯಾಮವಳಿಗಳನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಸುವಂತೆ ಆದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಸಭೆ ಅಧಿಕಾರಿಗಳು ಪುತ್ತೂರಿನ ಅಸುಪಾಸಿನ ಮದುವೆ ಹಾಲ್ ಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಆರೋಗ್ಯ ನಿರೀಕ್ಷಕ ರಾಮಚಂದ್ರ, ಸ್ಯಾನಿಟರಿ ಸೂಪರ್ ವೈಸರ್ ನಾಗೇಶ್, ವಾಹನ ಚಾಲಕ ರಾಧಾಕೃಷ್ಣ ಹಾಗೂ ಗೃಹರಕ್ಷಕ ದಳದ ಕೋವಿಡ್ ಮಾರ್ಷಲ್ ಗಳು ಉಪಸ್ಥಿತರಿದ್ದರು.