ಪುತ್ತೂರು : ಮಂಗಳೂರು ವಿಶ್ವವಿದ್ಯಾಲಯ ನಡೆಸಿದ 2019-20ನೇ ಸಾಲಿನ ಬಿ. ಎಡ್ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿವೇಕಾನಂದ ಬಿ. ಎಡ್ ಕಾಲೇಜಿಗೆ ಶೇಕಡಾ ನೂರು ಫಲಿತಾಂಶ ಬಂದಿದೆ.
ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 48 ಪ್ರಶಿಕ್ಷಣಾರ್ಥಿಗಳು ಹಾಜರಾಗಿದ್ದು 39 ಪ್ರಶಿಕ್ಷಣಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ದಿವ್ಯ ರವರು ಶೇ.86.66 ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ನಿವೃತ್ತ ಯೋಧ ಶಾಂತಿಗೋಡು ಸಾರಕೆರೆ ಪನಂಬು ನಿವಾಸಿ ವಸಂತ್ ಎಸ್. ರವರ ಪತ್ನಿ
ರಕ್ಷಿತಾ ಕೆ. ರವರು ಶೇ.84.88 ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ಇಚಲಂಗೋಡು ಕಡೆಗದ್ದೆ ಗಣೇಶ್ ಶೆಟ್ಟಿರವರ ಪತ್ನಿ. ಮಾನಸ ಕೆ ರವರು ಶೇ.84.71 ಪಡೆದು ತೃತೀಯ ಸ್ಥಾನಿಯಾಗಿದ್ದಾರೆ. ಇವರು ಗೋಪಾಲಕೃಷ್ಣ ಭಟ್ ಮತ್ತು ಪ್ರೇಮ ಕೆ. ಖಂಡೇರಿ ಕಾಟುಕುಕ್ಕೆ ರವರ ಪುತ್ರಿ, ದ್ವಿತೀಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಕೂಡ ಕಾಲೇಜಿಗೆ ಶೇಕಡಾ ನೂರು ಫಲಿತಾಂಶ ದಾಖಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.