ಪುತ್ತೂರು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಸಮೀಪ ಕಳೆದ 12 ವರುಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಗೂಡಗಂಡಿಯೊಂದಕ್ಕೆ ಬೆಂಕಿ ಬಿದ್ದಿರುವ ಘಟನೆ ಎ.29ರಂದು ನಡೆದಿದೆ.
ಕುಂಬ್ರ ನಿವಾಸಿಯಾಗಿರುವ ಅಬ್ದುಲ್ ಬಶೀರ್ ಎಂಬವರಿಗೆ ಸೇರಿದ ಗೂಡಗಂಡಿಯಾಗಿದೆ. ಘಟನಾ ಸ್ಥಳಕ್ಕೆ ಆಗ್ನಿಶಾಮಕ ದಳದ ಸಿಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆದಿದೆ.