ಪುತ್ತೂರು: ನಿಷೇದಾಜ್ಞೆಯ ನಡುವೆಯೂ ಸರಕಾರಿ ಜಾಗದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ, 5 ಮಂದಿಯನ್ನು ಬಂಧಿಸಿ ,7 ಕೋಳಿಗಳನ್ನು, ಹತ್ತು ದ್ವಿಚಕ್ರ ವಾಹನಗಳ ಸಹಿತ 7820 ರೂ.ನಗದು ವಶಕ್ಕೆ ಪಡೆದುಕೊಂಡ ಬಗ್ಗೆ ಘಟನೆ ಬಲ್ನಾಡಿನಲ್ಲಿ ನಡೆದಿದೆ.
ಕೋಳಿ ಅಂಕದಲ್ಲಿ ನಿರತರಾಗಿದ್ದ ಲಿಂಗಪ್ಪ ಮೂಲ್ಯ, ಸಂಜೀವ, ನಾರಾಯಣ ನಾಯ್ಕ, ಚಂದ್ರಶೇಖರ ಗೌಡ, ಸುಮಂತ್ ಎಂಬವರು ಬಂಧಿತ ಅರೋಪಿಗಳು. ಈ ವೇಳೆ ಕೆಲವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಂಪ್ಯ ಎಸೈ ಉದಯ ರವಿರವರ ನೇತೃತ್ವದಲ್ಲಿ ಪ್ರೊಬೆಷನರಿ ಎಸೈ ಶ್ರೀಕಾಂತ್ ರಾಥೋಡ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.