ಉಡುಪಿ : ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಪಾಂಬೂರಿನಲ್ಲಿ ನದಿಗೆ ಈಜಲು ಹೋದ ಮೂವರು ಯುವಕರು ನೀರುಪಾಲಾದ ಘಟನೆ ಇಂದು ನಡೆದಿದೆ.
ಕ್ವಾಲಿನ್ ಕ್ಯಾಸ್ತಲಿನೋ(21), ಜಾಬೀರ್ (18), ರಿಜ್ವಾನ್(28) ನೀರು ಪಾಲಾದ ದುರ್ದೈವಿಗಳು. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಸ್ಥಳೀಯರು, ಪೊಲೀಸರು ಧಾವಿಸಿ ಯುವಕರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.