ಬಂಟ್ವಾಳ: ಏಪ್ರಿಲ್ 4ರಂದು ಬಿ.ಸಿ.ರೋಡಿನಲ್ಲಿ ಯುವಕನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬ್ರಹ್ಮರಕೂಟ್ಲು ನಿವಾಸಿ ಮನೋಜ್ ಎಂಬಾತನ ಮೇಲೆ ಮಾರಕಾಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಲ್ಲಿ ಬಿ.ಸಿ.ರೋಡಿನ ಪರ್ಲಿಯಾ ಸಮೀಪ ಕೊಡಂಗೆ ಶಾಲೆ ಹತ್ತಿರದ ನಿವಾಸಿ ಮಹಮ್ಮದ್ ಇಮ್ರಾನ್ (38) ಮತ್ತು ಪರ್ಲಿಯಾ ಸಮೀಪ ಮದ್ದ ಮನೆ ನಿವಾಸಿ ಮಹಮ್ಮದ್ ಸಫ್ವಾನ್ (21) ಎಂಬಿಬ್ಬರನ್ನು ಬಂಧಿಸಲಾಗಿದೆ.
ಏ. 4ರಂದು ರಾತ್ರಿ ಸುಮಾರು 7.30ರ ವೇಳೆ ಬಂಟ್ವಾಳ ಬಿ.ಮೂಡಾ ಗ್ರಾಮದ ಅಜ್ಜಿಬೆಟ್ಟು ಕ್ರಾಸ್ ಎಂಬಲ್ಲಿ ಬ್ರಹ್ಮರಕೂಟ್ಲು ನಿವಾಸಿ ಮನೋಜ್ ಅವರ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮಾರಾಕಾಯುಧದಿಂದ ಹಲ್ಲೆ ನಡೆಸಿದ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.