ನೆಲ್ಯಾಡಿ: ಮುಸ್ಲಿಂ ಯುವಕರ ಗುಂಪೊಂದು ನೆಲ್ಯಾಡಿ ಕಟ್ಟೆಮಜಲು ನಿವಾಸಿ, ಸೈನಿಕ ನಾಗೇಶ್ ಎಂಬವರ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಪ್ರಕರಣವೊಂದು ನಡೆದ ಬಗ್ಗೆ ವರದಿಯಾಗಿದೆ.
ನೆಲ್ಯಾಡಿ ಕಟ್ಟೆಮಜಲು ನಿವಾಸಿ, ಭಾರತೀಯ ಸೇನೆಯಲ್ಲಿ ಸೈನಿಕರಾಗಿರುವ ನಾಗೇಶ್ ಕಟ್ಟೆಮಜಲು ಅವರ ಕಾರಿಗೆ ಮುಸ್ಲಿಂ ವ್ಯಕ್ತಿಯೋರ್ವರ ಬೈಕ್ ಡಿಕ್ಕಿಯಾಗಿತ್ತು. ಈ ವೇಳೆ
ಅವರೊಳಗೆ ಮಾತಿನ ಚಕಮಕಿಯೂ ನಡೆದಿತ್ತು. ಅನಂತರ ನಾಗೇಶ್ ಅವರು ಮನೆಗೆ ಬಂದ ಬಳಿಕ ನಾಗೇಶ್‌ರವರ ಮನೆಗೆ ಬಂದ 30 ಕ್ಕೂ ಹೆಚ್ಚು ಮುಸ್ಲಿಂ ಯುವಕರ
ಗುಂಪೊಂದು ನಾಗೇಶ್, ಅವರ ಪತ್ನಿ ಹಾಗೂ ಮನೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗುಂಪು ಚದುರಿಸಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ನಾಗೇಶ್ ಹಾಗೂ ಅವರ ಪತ್ನಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ