ಬೆಳ್ತಂಗಡಿ : ಯಾವುದೇ ಕೆಲಸ ಮಾಡುವುದಕ್ಕಿಂತ ಮೊದಲು ಅದರಿಂದ ಸಿಗುವ ಲಾಭ ಏನು ಎಂದು ಕೇಳುವ ಈ ಸಮಾಜದ ನಡುವೆ ಇಲ್ಲೊಬ್ಬ ಯಾವುದೇ ಸ್ವಾರ್ಥ ಇಲ್ಲದೇ ಕೆಲಸ ನಿರ್ವಹಿಸಿರುವವರು ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ 96 ಭೂತಿನ ಸದಸ್ಯ ಗುರುಪ್ರಸಾದ್ ಕೋಟ್ಯಾನ್ ಪಾಲೆಂಜ.
ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ವಾಸವಾಗಿರುವ ಉಜಿರೆಯವರಾದ ಕೃಷ್ಣಪ್ಪ ರವರಿಗೆ ಕೊರೊನ ಪಾಸಿಟಿವ್ ಆಗಿದ್ದು ಬೆಂಗಳೂರಿನಲ್ಲಿ ಯಾವುದೇ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ತೀರಾ ಹದಗೆಟ್ಟಿರುವ ಆರೋಗ್ಯದಿಂದಾಗಿ ಅವರನ್ನು ತಕ್ಷಣ ಅಲ್ಲಿಯ ಆಂಬ್ಯುಲೆನ್ಸ್ ನ ಮೂಲಕ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಕರೆ ತರಲಾಯಿತು. ಇಲ್ಲಿ ಅವರಿಗೆ ಐಸಿಯು ವ್ಯವಸ್ಥೆ ಸಿಗದೆ ಪರದಾಡುತ್ತಿದ್ದ ವಿಷಯ ತಿಳಿದ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಕಲಚೇತನರ ಕಾರ್ಯಕರ್ತರಾದ ವಿಪುಲ್ ರವರ ಕರೆಗೆ ತಕ್ಷಣ ಸ್ಪಂದಿಸಿದ ಗುರುಪ್ರಸಾದ್ ಸ್ಥಳಕ್ಕೆ ತೆರಳಿ ಅವರಿಗೆ ಬೇಕಾದ ವ್ಯವಸ್ಥೆ ಮಾಡಿ,ಸೋಂಕಿತ ವ್ಯಕ್ತಿಯನ್ನು ಮಂಗಳೂರು ಸರಕಾರಿ ಆಸ್ಪತ್ರೆಗೆ ಹೋಗಲು ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿದರು. ಈ ಸೋಂಕಿತ ವ್ಯಕ್ತಿ ವಿಕಲಚೇತನರಾಗಿರುತ್ತಾರೆ.