ಬಂಟ್ವಾಳ: ಕೊರೋನ ಸೋಂಕಿತರ ಚಿಕಿತ್ಸೆಯಲ್ಲಿ ಅತೀ ಪ್ರಮುಖವಾಗಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಬಹ್ರೇನ್ ನಿಂದ ಹೊರಟಿರುವ 40 ಮೆಟ್ರಿಕ್ ಟನ್ಆಕ್ಸಿಜನ್ ಮಂಗಳೂರು ಬಂದರ್ ಅನ್ನು ತಲುಪಿದೆ.
ಬಹ್ರೇನ್ ದೇಶದಿಂದ ಇಂಡಿಯನ್ ನೇವಿ ಹಡಗಿನ ಮೂಲಕ ಹೊರಟಿರುವ 40 ಟನ್ ಆಕ್ಸಿಜನ್ ಸಿಲಿಂಡರ್ ಗಳು ಮಂಗಳೂರು ಹಡಗು ನಿಲ್ದಾಣಕ್ಕೆ ತಲುಪಿದೆ. ರೆಡ್ ಕ್ರಾಸ್ ಮೂಲಕ ಆಕ್ಸಿಜನ್ ಅನ್ನು ಮಂಗಳೂರು ಅಧಿಕಾರಿಗಳಿಗೆ ಹಸ್ತಾಂತರಿಸುವ ಕೆಲಸ ಆಗುತ್ತಿದೆ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಡಾ. ರಾಜೇಶ್ ಕೆ.ವಿ., ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ರೆಡ್ ಕ್ರಾಸ್ ಅಧಿಕಾರಿಗಳು, ಎನ್.ಎಂ.ಪಿ.ಟಿ. ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧಿಕಾರಿಗಳು, ಗಣೇಶ್ ಶಿಪ್ಪಿಂಗ್ ಮಾಲಕ, ಮಾಜಿ ಸಚಿವ ನಾಗರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.