ಪುತ್ತೂರು: ದೇಶದಲ್ಲಿ ಬಿಹಾರ ವಿಧಾನಸಭಾಕ್ಷೇತ್ರಗಳಲ್ಲಿ ನಡೆದ ಚುನಾವಣೆ ಎನ್.ಡಿ.ಎ ಒಕ್ಕೂಟ ಮತ್ತು ಕರ್ನಾಟಕದಲ್ಲಿ ಶಿರಾ ಮತ್ತು ಆರ್ ಆರ್ ನಗರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪುತ್ತೂರು ಬಿಜೆಪಿ ಕಚೇರಿಯ ಎದುರು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು.
ಈ ಸಂದರ್ಭದಲ್ಲಿ ಬೂಡಿಯಾರ್ ರಾಧಾಕೃಷ್ಣ ರೈ,ನಗರ ಸಭಾ ಅಧ್ಯಕ್ಷ ಜೀವಂದರ್ ಜೈನ್,ಉಪಾಧ್ಯಕ್ಷೆ ವಿಧ್ಯಾ ಆರ್ ಗೌರಿ,ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ ಜಿ ಜಗನ್ನಿವಾಸ್ ರಾವ್,ನಗರಸಭಾ ಸದಸ್ಯರಾದ ಗೌರಿ ಬನ್ನೂರು,ಶಿವರಾಮ ಸಪಲ್ಯ,ಪುರುಷೋತ್ತಮ್ ಮುಂಗ್ಲಿಮನೆ,ಸಚಿನ್ ಶೆಣೈ,ಹರಿಪ್ರಸಾದ್ ಯಾದವ್ ಮತ್ತಿತರರು ಉಸ್ಥಿತರಿದ್ದರು.