ವಿಟ್ಲ : ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ನಾಟೆಕಲ್ಲಿನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದಿ.ಅಚ್ಯುತ ನಾಯಕ್ ಈ ಶಾಲೆಯ ಸ್ಥಾಪನೆಗೆ ಕಾರಣಕರ್ತರಾದವರು ಇಂತಹ ಸಮಾಜಮುಖಿ ವ್ಯಕ್ತಿಯನ್ನು ಕಳೆದುಕೊಂಡದ್ದು, ಶಾಲೆಗೆ ಮಾತ್ರವಲ್ಲದೆ ಊರಿಗೆ ತುಂಬಲಾರದ ನಷ್ಟವೆಂದು ಶಾಲೆಯ ಪ್ರಥಮ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗಣಪತಿ ಭಟ್ ಹೇಳಿದರು.

ಗ್ರಾಮ ಪಂಚಾಯತ್ ಪೂರ್ವ ಅಧ್ಯಕ್ಷರುಗಳಾದ ಹರಿಶ್ಚಂದ್ರ ನಾಯಕ್ ಮತ್ತು ಜಯಪ್ರಕಾಶ್ ನಾಯಕ್ ನುಡಿನಮನ ಸಲ್ಲಿಸಿ ಮಾತನಾಡಿದರು.
ಈ ಹಿಂದೆ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ ಎಸ್.ಕೆ ಮತ್ತು ಪುಷ್ಪಾವತಿ ರವರನ್ನು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಪೋಷಕರ ಆಶಯದಂತೆ ಅವರು ಬಯಸುವ ರೀತಿಯಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಂಡು ಶಿಕ್ಷಣವನ್ನು ನೀಡುವ ವ್ಯವಸ್ಥೆಯಾಬೇಕೆಂದು ಸನ್ಮಾನಿತ ನಿವೃತ್ತ ಶಿಕ್ಷಕ ನಾರಾಯಣ ಪೂಜಾರಿ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಪುಷ್ಪಾವತಿ ರವರು ಮಾತನಾಡಿದರು. ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ನಡೆದವು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರೇಷ್ಮಾ ಬಾಯಾರು ,ಇಸ್ಮಾಯಿಲ್ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯತೀಶ ಹಡೀಲು ,ಪೋಷಕರು ,ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ಶ್ರೀಪತಿ ನಾಯಕ್ ಸ್ವಾಗತಿಸಿ, ಪ್ರತೀಮಾ ವಂದಿಸಿ, ರೇಣುಕಾ ನಿರ್ವಹಿಸಿದರು.