ಪುತ್ತೂರು : ಕೊರೊನ ಹಾಗೂ ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳ ಈ ಸಂದರ್ಭದಲ್ಲಿ ರೋಗಿಗಳಿಗೆ ಬಹಳಷ್ಟು ರಕ್ತಗಳ ಅವಶ್ಯಕತೆ ಇರುವುದರಿಂದ ಪುತ್ತೂರು ಬ್ಲಡ್ ಬ್ಯಾಂಕ್ ನಲ್ಲಿ ರಕ್ತಕ್ಕೆ ಕೊರತೆ ಉಂಟಾಗ ಬಾರದೆಂಬ ಹಿತದ್ರಷ್ಟಿಯಿಂದ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರ ಸೂಚನೆ ಮೇರೆಗೆ ಪುತ್ತೂರು ಬ್ಲಾಕ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಹಾಗು ಪುತ್ತೂರು ಯಂಗ್ ಬ್ರಿಗೇಡ್ ವತಿಯಿಂದ ಮೇ.9 ರಂದು ರಕ್ತ ದಾನ ಹಾಗು ಕಾಂಗ್ರೆಸ್ ರಕ್ತ ನಿಧಿ ಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮ ದಲ್ಲಿ ಉಪ್ಪಿನಂಗಡಿ – ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ : ರಾಜರಾಮ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿ, ದ ಕ ಜಿಲ್ಲಾ ಕಾಂಗ್ರೆಸ್ ನ ಪ್ರದಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ನ ಸಂಚಾಲಕರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ಪುತ್ತೂರು ನಗರ ಸಭಾ ಸದಸ್ಯ ಹಾಗು ಯಂಗ್ ಬ್ರಿಗೇಡ್ ಮುಖಂಡ ರಿಯಾಜ್ ಪರ್ಲಡ್ಕ, ಪುತ್ತೂರು ಬ್ಲಾಕ್ ಕಾಗ್ರೇಸ್ ಕೆಪಿಸಿಸಿ ಐ ಟಿ ಸೆಲ್ ನ ಮುಖ್ಯಸ್ಥ ಪೂರ್ಣೇಶ್ ಭಂಡಾರಿ, ಕೊಡಿಂಬಾಡಿ ವಲಯ ಕಾಂಗ್ರೆಸ್ಅಧ್ಯಕ್ಷ ಮೋನಪ್ಪ ಗೌಡ ಬೆಳ್ಳಿಪ್ಪಾಡಿ, ಹಿರೇಬಂಡಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಗೌಡ ಪಟಾರ್ಥಿ, ಅಳಿಕೆ ಗ್ರಾಮ ಪಂಚಾಯತ್ ಸದಸ್ಯ ಹಾಗು ನ್ಯಾಯವಾದಿಗಳಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಮೊದಲಾದವರು ಉಪಸ್ಥಿತರಿದ್ದರು.
ಶ್ರೀಮತಿ ಶಕುಂತಲಾ ಶೆಟ್ಟಿಯವರು ಪುತ್ತೂರು ಕಾಂಗ್ರೆಸ್ ಮುಖಂಡರು ಹಾಗು ಕೆಪಿಸಿಸಿ ಸಂಯೋಜಕರಾದ ಟಿ ಪಿ ರಮೇಶ್ ರವರೊಂದಿಗೆ ನಡೆಸಿರುವ ಜೂಮ್ ಮಿಟಿಂಗ್ ನಲ್ಲಿ ಚರ್ಚಿಸಿ ಪುತ್ತೂರಿನಲ್ಲಿ ಕಾಂಗ್ರೆಸ್ ರಕ್ತ ನಿಧಿ ಸ್ಥಾಪಿಸಬೇಕೆಂಬ ತೀರ್ಮಾನದಂತೆ ಈ ಕಾರ್ಯಕ್ರಮ ನಡೆದಿದೆ ಎಂದು ತಿಳಿದು ಬಂದಿದೆ. ಜನರಿಗೆ ರಕ್ತದ ಅವಶ್ಯಕತೆ ಇದ್ದಲ್ಲಿ ಪುತ್ತೂರು ಕಾಂಗ್ರೆಸ್ ರಕ್ತ ನಿಧಿ ಸಂಘಟಕರನ್ನು ಸಂಪರ್ಕಿಸಲು ಅವರು ತಿಳಿಸಿದ್ದಾರೆ.