ಮಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ.10 ರಿಂದ ಮುಂದಿನ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಈ ಅಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳಲ್ಲಿ ಬಂದರೆ ವಾಹನ ಸೀಜ್ ಮಾಡಲಾಗುತ್ತದೆ ಎಂದು ಕಮಿಷನರ್ ಶಶಿಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ಸೋಂಕು ಹತೋಟಿಗೆ ಸರ್ಕಾರ ಜಾರಿಮಾಡಿರುವ ಲಾಕ್ ಡೌನ್ ಗೆ ಎಲ್ಲರೂ ಬೆಂಬಲಿಸಬೇಕು ಬದಲಿಗೆ ಅನಾವಶ್ಯಕವಾಗಿ ಓಡಾಟ ಮಾಡುವುದು ಕುಂಟು ನೆಪ ಹೇಳಿ ರಸ್ತೆಗೆ ಇಳಿಯುವುದು ಸೇರಿದಂತೆ ಕೋವಿಡ್ ರೂಲ್ಸ್ ಬ್ರೇಕ್ ಮಾಡುವ ಯಾವುದೇ ಕಾರ್ಯ ಕೈಗೊಂಡವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕದಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನು ಅಗತ್ಯ ವಸ್ತುಗಳನ್ನು ಕೊಳ್ಳುವ ನೆಪದಲ್ಲಿ ವಾಹನ ತೆಗೆದುಕೊಂಡು ಬಂದ ವಾಹನಗಳನ್ನು ಸೀಜ್ ಮಾಡಲಾಗುವುದು ಅಷ್ಟೊಂದು ಅಗತ್ಯವಿರುವವರು ನಡೆದುಕೊಂಡು ಬಂದು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.