ಬಂಟ್ವಾಳ : ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕರಾದ ದಿ. ವೆಂಕಟರಮಣ ಹೊಳ್ಳ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕ ದಿ. ಶರತ್ ಮಡಿವಾಳ ಇವರುಗಳ ಸ್ಮರಣಾರ್ಥವಾಗಿ ನೂತನ “ಆಂಬ್ಯುಲೆನ್ಸ್ ಲೋಕಾರ್ಪಣೆ” ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವು ಮೇ.13 ರಂದು ಬೆಳಿಗ್ಗೆ ಬಂಟ್ವಾಳ ಸೇವಾ ಭಾರತಿ (ರಿ) ಕಾರ್ಯಾಲಯ ಬಿ. ಸಿ ರೋಡ್ ನಲ್ಲಿ ನಡೆಯಲಿದೆ.
ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆಗೆ ಎರಡನೇ ಆಂಬುಲೆನ್ಸ್ ಇದಾಗಿದ್ದು ಪುತ್ತೂರು ತಾಲೂಕಿನ ವತಿಯಿಂದ ಈಗಾಗಲೇ ಅಂಬುಲೆನ್ಸ್ ಲೋಕಾರ್ಪಣೆ ಗೊಂಡು ಕೊರೊನಾ ಸೊಂಕೀತರ ಅಶಕ್ತರ ನೆರವಿಗೆ 24×7 ಸೇವೆ ಮಾಡುತ್ತಿವೆ.