ಪುತ್ತೂರು : ತಮಗೆ ತಂದಿರುವ ಆಹಾರವನ್ನು ಭಿಕ್ಷುಕನಿಗೆ ನೀಡುವ ಮೂಲಕ ಪೊಲೀಸ್ ಸಿಬ್ಬಂದಿ ವನಜರವರು ಮಾನವೀಯತೆಯನ್ನು ಮೆರೆದ ಘಟನೆ ಇಂದು ಪುತ್ತೂರಿನ ಹಾರಾಡಿ ಚೆಕ್ ಪೋಸ್ಟ್ ಬಳಿ ನಡೆದಿದೆ.ಈ ಸಂದರ್ಭದಲ್ಲಿ HC ಅಶೋಕ್ ಬಂಡಾರಿ ರಾಗಿದಕುಮೇರ್ ಉಪಸ್ತಿತರಿದ್ದರು.
ಇವತ್ತಿನ ದಿನದಲ್ಲಿ ಆರಕ್ಷಕ ಸಿಬ್ಬಂದಿಗಳು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಬಗೆಗೆ ಇಲ್ಲದ ಅಪಪ್ರಚಾರ, ಅವಹೇಳನಕಾರಿಯಾಗಿ ನಿಂದಿಸುವ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಋಣಾತ್ಮಕ ವೀಡಿಯೋಗಳೇ ಹರಿದಾಡುತ್ತವೆ. ಈ ಮೂಲಕ ಪೊಲೀಸ್ ಸಿಬ್ಬಂದಿಗಳನ್ನು ನಿಂದಿಸುವ ಬದಲು ಅವರಲ್ಲೂ ಮನಸಿದೆ, ಅವರಿಗೂ ಕುಟುಂಬವಿದೆ, ಅವರೂ ಶ್ರಮ ಜೀವಿಗಳು ಹಾಗೇ ಅವರಲ್ಲೂ ಮಾನವೀಯತೆ ಇದೆ.. ಇಂತಹ ಮಾನವೀಯ ಕಾರ್ಯಗಳಿಗೆ ಪ್ರೋತ್ಸಾಹವನ್ನು ನೀಡುವವರು ನಾವಾಗೋಣ…