ಪುತ್ತೂರು : ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಮುಂಡೂರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ದೀಪಿಕಾ ರವರು ಮುಂಡೂರಿನ ಕೆಮ್ಮಿಂಜೆ ವಾರ್ಡ್ ನ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಉಚಿತವಾಗಿ ದಿನಸಿ ಸಾಮಾಗ್ರಿಗಳನ್ನು ಪೂರೈಕೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಕೊರೊನಾ ಮಹಾಮಾರಿಯಿಂದ ದೇಶವೆ ತತ್ತರಿಸಿದೆ. ನಮ್ಮ ಸುರಕ್ಷತೆಗಾಗಿ ಸರಕಾರದ ನೀತಿ ನಿಯಮಗಳನ್ನು ಪಾಲಿಸುವುದು ಅತ್ಯವಶ್ಯಕ. ಜೀವ ಹಾಗೂ ಜೀವನ ಎರಡೂ ಮುಖ್ಯವಾಗಿರುವ ಈ ಸಂದರ್ಭದಲ್ಲಿ (ಕೆಮ್ಮಿಂಜೆ ವಾರ್ಡಿಗೆ ಸಂಬಂಧಿಸಿದಂತೆ) ತರ್ತು ಸೇವೆಗೆ ನಾವು ಸಿದ್ದರಿದ್ದೇವೆ. ಔಷಧಿ, ದಿನನಿತ್ಯ ಬಳಕೆ ವಸ್ತುಗಳಿಗೆ ತೊಂದರೆಯಾದಲ್ಲಿ ನಮ್ಮನ್ನು ಸಂಪರ್ಕಿಸಿ ಎಂದು ಶ್ರೀಮತಿ ದೀಪಿಕಾ ಸಿ.ಕೆ, ಸದಸ್ಯರು ಮುಂಡೂರು ಗ್ರಾಮಪಂಚಾಯತ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.