ಬೆಂಗಳೂರು: ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 24 ಜನ ಮೃತಪಟ್ಟಿದ್ದು ಇತ್ತೀಚೆಗೆ ವರದಿಯಾಗಿತ್ತು. ಆದ್ರೆ ಈ ಬಗ್ಗೆ ತನಿಖೆಗೆ ನೇಮಿಸಿದ್ದ ಏಕಸದಸ್ಯ ಆಯೋಗ ನೀಡಿದ ವರದಿ ಪ್ರಕಾರ ಸಾವನ್ನಪ್ಪಿದವರು 24 ಜನ ಅಲ್ಲ 36 ಜನ…!
ಹೌದು. ಮೇ 2ರಂದು ತಡರಾತ್ರಿ ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸರಣಿ ಸಾವುಗಳು ಸಂಭವಿಸಿದ್ದವು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎ.ಎನ್ ವೇಣುಗೋಪಾಲಗೌಡ ಅವರಿಗೆ ಕೋರಿತ್ತು. ಈ ದುರಂತ ಘಟನೆ ಬಗ್ಗೆ ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲ್ ಗೌಡ ಅವರು ಹೈಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ.
ದುರಂತದಲ್ಲಿ ಒಟ್ಟು 36 ಮಂದಿ ಸಾವನ್ನಪ್ಪಿದ್ದು ಇದರಲ್ಲಿ 14 ಜನ ಕೊರೊನಾ ಸೋಂಕಿತರು ಇದ್ದರು. ಉಳಿದವರು ಬೇರೆ ಕಾಯಿಲೆಗಳ ರೋಗಿಗಳಾಗಿದ್ದರು. ಆದ್ರೆ ಎಲ್ಲರ ಸಾವಿಗೂ ಆಕ್ಸಿಜನ್ ಕೊರತೆಯೇ ಕಾರಣ ಎಂದು ವರದಿ ಕೊಟ್ಟಿದ್ದಾರೆ.