ಉಪ್ಪಿನಂಗಡಿ:-ಉಪ್ಪಿನಂಗಡಿ ಇಲ್ಲಿನ ಮಾದರಿ ಶಾಲೆಯ ಆವರಣದಲ್ಲಿರುವ ಉಪ್ಪಿನಂಗಡಿ ಗೃಹರಕ್ಷಕದಳ ಕಚೇರಿಗೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಮಾಡೆಂಟ್ ಡಾ.ಮುರಳಿ ಮೋಹನ್ ಚೂಂತಾರುರವರು ಭೇಟಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಉಪ್ಪಿನಂಗಡಿಯಲ್ಲಿ ಪ್ರವಾಹ ರಕ್ಷಣಾ ಸಾಮಾಗ್ರಿಗಳನ್ನು ಪರಿಶೀಲಿಸಲಾಯಿತು ನಂತರ ಇಲ್ಲಿನ ಪ್ರವಾಹ ರಕ್ಷಣಾ ತಂಡವನ್ನು ಸನ್ನದಗೊಳಿಸಲಾಯಿತು ಹಾಗೂ ಪ್ರವಾಹ ತಂಡಕ್ಕೆ ಜಿಲ್ಲಾಡಳಿತ ನೀಡಿದ ಟೆಂಟ್ ಹಾಗೂ 5 ಗಮ್ ಬೂಟ್ ವಿತರಿಸಲಾಯಿತು ಈ ವೇಳೆ ಮಾತನಾಡಿದ ಕಮಾಡೆಂಟ್ ವರ್ಷ ಪ್ರತಿಯಂತೆ ಪ್ರಸ್ತುತ ವರ್ಷಗಳಲ್ಲಿ ಉಪ್ಪಿನಂಗಡಿಯಲ್ಲಿ ಉಪ್ಪಿನಂಗಡಿ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ.ನೇತೃತ್ವದಲ್ಲಿ ಪ್ರವಾಹ ರಕ್ಷಾಣಾ ರಚಿಸಲಾಯಿತು ಈ ತಂಡದಲ್ಲಿ ಒರ್ವ ನುರಿತ ಈಜುಗಾರ,ಎಲೆಕ್ಟ್ರೀಸಿಯನ್,ಕಟ್ಟಡ ನಿರ್ಮಿತ ಪರಿಣತ,ಇಬ್ಬರು ಸಹಾಯಕರಿದ್ದು ಕಾರ್ಯಚರಣೆ ನಡೆಸಲಿದ್ದಾರೆ.
ಉಪ್ಪಿನಂಗಡಿಯ ಈ ತಂಡದಲ್ಲಿ ಗೃಹರಕ್ಷಕದಳದ ಎಸ್.ಎಲ್ ಜನಾರ್ಧನ ಆಚಾರ್ಯ, ಗೃಹರಕ್ಷಕರಾದ ವಸಂತ,ಸಮದ್,ಸೋಮನಾಥ್ ಇದ್ದು ಕಂದಾಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಕಾರದೊಂದಿಗೆ ಪುತ್ತೂರು ಸಹಾಯಕ ಆಯುಕ್ತರು ಹಾಗೂ ಪುತ್ತೂರು ತಹಶೀಲ್ದಾರ್ ಆದೇಶದನ್ವಯ ಕಾರ್ಯಚರಣೆ ನಡೆಸಲಿದ್ದಾರೆ.
ಉಪ್ಪಿನಂಗಡಿ ನೆರೆ ಪಿಡಿತ ಪ್ರದೇಶವಾಗಿದ್ದು ಉಪ್ಪಿನಂಗಡಿ ದೇವಾಲಯದ ಸ್ಥಾನ ಘಟ್ಟದ ಬಳಿ ದೋಣಿ ,ಲೈಪ್ ಜಾಕೇಟ್, ಆಸ್ಕಲೈಟ್, ಮರಕತ್ತರಿಸುವಯಂತ್ರ ಹಾಗೂ ಇತರ ಸಲಕರಣೆಗಳೊಂದಿಗೆ ಮುಕ್ಕಾಂ ಇರಲಿದೆ… ಇಲ್ಲಿ ಸಂಭಾವ್ಯ ಅಪಯಗಳನ್ನು ಎದುರಿಸಲು ಅಗತ್ಯ ಪರಿಕರಣಗಳನ್ನು ಜಿಲ್ಲಾಡಳಿತ ಒದಗಿಸಿದೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಕಮಾಡೆಂಟ್ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಹಾಗೂ ಕೊವೀಡ್ 19 ಮಾರ್ಷಲ್ ಕರ್ತವ್ಯ ಗೃಹರಕ್ಷಕರಿಗೆ ಮಾಸ್ಕ್,ಪೇಸ್ ಸಿಲ್ಡ್,ಸ್ಯಾನಿಟೈಜರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಘಟಕದ ಸಿಬ್ಬಂದಿ ದಿವಾಕರ್, ದಿಶ್ಯಾಂತ್,ಘಟಕದ ಮಾರ್ಷಲ್ ಕರ್ತವ್ಯದ ಚೇತನ್,ಗೊಪಾಲ್, ಯತಿರಾಜ್, ನಿಖಿಲ್ ,ಉಪಸ್ಥಿತರಿದ್ದರು.