ಪುತ್ತೂರು : ಯುವತಿಯೋರ್ವಳಿಗೆ ಹಾಗೂ ಆಕೆಯ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಾಗಿ ಆರೋಪಿಸಿ ನೀಡಿರುವ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಣಾಜೆ ನಿವಾಸಿ ಯುವತಿ ನೀಡಿರುವ ದೂರಿನ ಮೇರೆಗೆ ಬಾಬು, ಲಕ್ಷ್ಮೀ, ಗಿರೀಶ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವತಿ ಫೆ.1 ರಂದು ಸಂಜೆ ತನ್ನ ಮನೆಯಲ್ಲಿರುವಾಗ, ಬಾಬು ಎಂಬವರು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದು, ಆ ಸಮಯ ಯುವತಿಯ ತಾಯಿ ಬಂದಾಗ, ಲಕ್ಷ್ಮಿ ಎಂಬವರು ಕೂಡಾ ಅವ್ಯಾಚವಾಗಿ ಬೈದು, ಯುವತಿಯ ತಾಯಿಗೆ ಹಲ್ಲೆ ನಡೆಸಿರುತ್ತಾರೆ.
ಗಿರೀಶ್ ಎಂಬವರು ಯುವತಿಗೆ ಹಲ್ಲೆ ನಡೆಸಿದ್ದು, ಬಳಿಕ 3 ಜನ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ 25-2024 ಕಲಂ:- 323,504,506 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.