ಬೆಂಗಳೂರು : ಪ್ರಿಯಕರನೊಂದಿಗೆ ಕಸ ಬಿಸಾಡಲು ಹೋದ ಪ್ರಿಯತಮೆ ಮೇಲೆ ಕಾಮುಕರು ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಕೇಳಿಬಂದಿದೆ.
ಕೋರಮಂಗಲ ಪಾಸ್ ಪೋರ್ಟ್ ಕಚೇರಿ ಸಮೀಪದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಪ್ರಿಯಕರನ ಎದುರಲ್ಲೇ ಯುವತಿಗೆ ಮೇಲೆ ನಾಲ್ವರು ಕಾಮುಕರು ಯುವತಿಯ ಮೈಮುಟ್ಟಿ ಅಸಭ್ಯ ವರ್ತನೆ ತೋರಿದ್ದಾರೆ. ವಿರೋಧ ವ್ಯಕ್ತಪಡಿಸಿದ ಯುವತಿಯ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಮುಖಕ್ಕೆ ಪಂಚ್ ನೀಡಿದ್ದಾರೆ. ತಡೆಯಲು ಹೋದ ಪ್ರಿಯಕರನ ಮೇಲೆಯೂ ಹಲ್ಲೆ ಮಾಡಿದ್ದಾರೆ.
ನಾಲ್ವರು ಯುವಕರು ಮರದ ತುಂಡಿನಿಂದ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಯಿಂದ ದೂರು ದಾಖಲಾಗಿದೆ.
ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರೆಲ್ಲರು ಅಪ್ರಾಪ್ತರೆಂದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.