ಪುತ್ತೂರು: ಶಾಸಕರ ವಾರ್ ರೂಂ ಮುಖಾಂತರ ದಾನಗಳ ಸಹಕರಾದೊಂದಿಗೆ ತಾಲೂಕಿನ 11 ಆಂಬ್ಯುಲೆನ್ಸ್ ಚಾಲಕರಿಗೆ ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್‌ನ್ನು ಮೇ.30ರಂದು ಪಕ್ಷದ ಕಚೇರಿ ಆವರಣದಲ್ಲಿ ವಿತರಿಸಲಾಯಿತು.
ಕಿಟ್ ವಿತರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೋವಿಡ್ ರೋಗಿಗಳಿಗೆ ತುರ್ತು ಸೇವೆಯು ಆಂಬ್ಯುಲೆನ್ಸ್ ಚಾಲಕರ ಮುಖಾಂತರ ದೊರೆಯುತ್ತಿದೆ. ಹೀಗಾಗಿ ರೋಗಿಗಳ ಆರೋಗ್ಯ ರಕ್ಷಣೆಯ ಜೊತೆಗೆ ಚಾಲಕರು ಸುರಕ್ಷಿತವಾಗಿರಬೇಕು. ಅವರ ಕುಟುಂಬಸ್ಥರು ಸುರಕ್ಷಿತವಾಗಿರಬೇಕು. ಹೀಗಾಗಿ ಚಾಲಕರ ಆರೋಗ್ಯ ರಕ್ಷಣೆಯ ಪ್ರಾಮುಖ್ಯತೆ ನೀಡಿ ಪಿಪಿಇ ಕಿಟ್ ಧರಿಸಿ ಚಾಲನೆಯಲ್ಲಿ ತೊಡಗಿಸಿಕೊಳ್ಳಬೇಕು. ನಿಮ್ಮ ಮೂಲಕ ಸಮಾಜದ ಕಟ್ಟ ಕಡೇಯ ವ್ಯಕ್ತಿಗೂ ಸೇವೆ ದೊರೆಯುವಂತಾಗಬೇಕು ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮಣಿ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ, ಸರಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ.ಕೃಷ್ಣಪ್ರಸನ್ನ, ರಫೀಕ್ ದರ್ಬೆ, ಬಿಜೆಪಿ ನಗರ ಮಂಡಲದ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ ಸೇರಿದಂತೆ ಹಲವು ಮಂದಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ನಗರ ಸಭಾ ಮಾಜಿ ಸದಸ್ಯ ರಾಜೇಶ್ ಬನ್ನೂರು ಸ್ವಾಗತಿಸಿ, ವಂದಿಸಿದರು.
ತಾಲೂಕಿನ ಒಟ್ಟು 11 ಆಂಬ್ಯುಲೆನ್ಸ್ ಚಾಲಕರಿಗೆ 5 ಜತೆ ಪಿಪಿಇ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.