ಬೆಳ್ತಂಗಡಿ: ವಿದ್ಯುತ್ ಅಘಾತಕ್ಕೆ ಒಳಗಾಗಿ ತಾಯಿ ಹಾಗೂ ಮಗು ದಾರುಣವಾಗಿ ಮೃತಪಟ್ಟ ಘಟನೆ ಮೇ.30ರಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಪಟ್ರಮೆ ಕಜೆ ಎಂಬಲ್ಲಿ ನಡೆದಿದೆ.
ತಾಯಿ ತನ್ನ ಮಗುವನ್ನು ಹಿಡಿದುಕೊಂಡು ಪಂಪ್ ಸ್ವಿಚ್ ಆನ್ ಮಾಡಲು ಹೋಗಿದ್ದ ವೇಳೆ ವಿದ್ಯುತ್ ಆಘಾತಕ್ಕೆ ಒಳಗಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಗೀತಾ (3೦) ಮಗು ಭವಿಶ್ (5) ಎನ್ನಲಾಗಿದೆ. .