ಕಾವು: ಪ್ರಧಾನ ಮಂತ್ರಿ ನರೇಂದ್ರಮೋದಿ ಯವರ ನೇತೃತ್ವದ ಕೇಂದ್ರ ಸರ್ಕಾರ ಏಳು ವರ್ಷ ಪೂರೈಸಿದ ಹಿನ್ನಲೆಯಲ್ಲಿ ದೇಶದಾದ್ಯಂತ ಬಿಜೆಪಿ ವತಿಯಿಂದ “ಸೇವಾಹೀ ಸಂಘಟನ್” ಎಂಬ ಹೆಸರಿನಲ್ಲಿ ಆಚರಿಸುತ್ತಿದ್ದು ಬಿಜೆಪಿ ಶಕ್ತಿ ಕೇಂದ್ರ ಮಾಡ್ನೂರು ಹಾಗೂ ಯುವ ಮೋರ್ಚಾ ಮಾಡ್ನೂರು ಇದರ ವತಿಯಿಂದ ಸಸಿ ನೀಡುವುದರ ಮೂಲಕ ಹಾಗೂ ಗ್ರಾಮದ ಆಶಾ ಕಾರ್ಯಕರ್ತೆಯರ ಮನೆಗೆ ತೆರಳಿ ಆಹಾರ ಧಾನ್ಯಗಳ ಕಿಟ್ ವಿತರಣೆ ಹಾಗೂ ಕೆಲ ಕೊರೊನ ಸೋಂಕಿತರ ಮನೆಗೆ ತೆರಳಿ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ, ಮಾಡ್ನೂರು ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಲೋಕೇಶ್ ಚಾಕೋಟೆ, ಪಂಚಾಯತ್ ಸದಸ್ಯರಾದ ಅನಿತಾ ಜಗದೀಶ್ ಆಚಾರಿಮೂಲೆ, ತಾಲೂಕು ಯುವ ಮೋರ್ಚಾ ಕಾರ್ಯದರ್ಶಿ ಶ್ರೀಕಾಂತ್ ಕಾವು, ಬಿಜೆಪಿ ಪಕ್ಷದ ಪ್ರಮುಖರಾದ ಶ್ರೀಧರ್ ರಾವ್ ನಿಧಿಮುಂಡ, ಪೂವಪ್ಪ ನಾಯ್ಕ, ಭಾಸ್ಕರ ಬಲ್ಯಾಯ ಕಾವು, ಹೊನ್ನಪ್ಪ ಪೂಜಾರಿ ಪಿಲಿಪಂಜರ, ನವೀನ್ ನನ್ಯಪಟ್ಟಾಜೆ, ಧನಂಜಯ ನಾಯ್ಕ , ಸಂದೇಶ್ ಚಾಕೋಟೆ ಉಪಸ್ಥಿತರಿದ್ದರು.